ಪೊಲೀಸ್ ನೇಮಕಾತಿ ಪರೀಕ್ಷೆಗೆ 3700 ಮಂದಿ ಹಾಜರು

 

ಬೆಳ್ತಂಗಡಿ; ಕರ್ನಾಟಕ ಪೊಲೀಸ್ ಇಲಾಖೆ ವತಿಯಿಂದ ಮಂಗಳೂರು ನಗರಕ್ಕೆ ಸಂಬಂಧಿಸಿದಂತೆ 50 ಮಂದಿ ಪೊಲೀಸ್ ಕಾನ್ಸ್‌ಟೇಬಲ್ ಗಳ‌ ನೇರ ನೇಮಕಾತಿಗಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳಲ್ಲಿ ಸೆ. 20 ರಂದು ನಡೆದ ಲಿಖಿತ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತು.
ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ‌ಪ್ರಸಾದ್ ಐಪಿಎಸ್ ಅವರ ನೇತೃತ್ವದಲ್ಲಿ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ.ಅವರ ಮೇಲುಸ್ತುವಾರಿಯಲ್ಲಿ ಪರೀಕ್ಷೆ ಬೆಳಿಗ್ಗೆ 11 ಗಂಟೆಯಿಂದ 12.30 ರವರೆಗೆ ನಡೆಯಿತು
ಎಸ್.ಡಿ.ಎಂ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಸ್ನಾತಕೋತ್ತರ ಪದವಿ ಕಾಲೇಜು, ಡಿ.ಎಡ್ ಮತ್ತು ಬಿ.ಎಡ್ ಕಾಲೇಜು, ಇಂಜಿನಿಯರಿಂಗ್ ‌ಮತ್ತು ಡಿಪ್ಲೋಮಾ ಕಾಲೇಜುಗಳು ಸೇರಿ ಒಟ್ಟು 6 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು.
ಸದ್ರಿ‌ ನೇಮಕಾತಿಗೆ ರಾಜ್ಯದ ಕಲ್ಯಾಣ ಕರ್ನಾಟಕ,‌ ನಾನ್ ಕಲ್ಯಾಣ‌ ಕರ್ನಾಟಕ‌ ಭಾಗಗಳಿಂದಲೂ ಸೇರಿ ಒಟ್ಟು 4 ಸಾವಿರ ಮಂದಿ ಆನ್ಲೈನ್‌ ಮೂಲಕ ಅರ್ಜಿಹಾಕಿದ್ದರು. ನಿಯಮಾನುಸಾರ ಪ್ರವೇಶಾತಿ ಪತ್ರ (ಹಾಲ್ ಟಿಕೇಟ್) ಪಡೆದುಕೊಂಡಿದ್ದವರ ಪೈಕಿ 3700 ಮಂದಿ ರವಿವಾರ
ಪರೀಕ್ಷೆಗೆ ಹಾಜರಾಗಿದ್ದರು. ಸಿಸಿ‌ ಟಿವಿ ಕಣ್ಗಾವಲು, ಅಗತ್ಯ ಇರುವ ಕಡೆ ಪೊಲೀಸ್ ತಂಡದಿಂದಲೇ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿತ್ತು.  ಆಶಾ ಕಾರ್ಯಕರ್ತೆಯರು  ಎಲ್ಲರನ್ನೂ ಥರ್ಮಲ್ ಸ್ಕ್ಯಾನ್ ಮಾಡಿ ಒಳಬಿಡುತ್ತಿದ್ದರು.
 ಪರೀಕ್ಷೆಗೆ ಹಾಜರಾಗುವ‌ ಮುನ್ನ ಕೋವಿಡ್ ಪರೀಕ್ಷೆ ನಡೆದಿದ್ದು, ಈ ಪೈಕಿ ನಾಲ್ವರಿಗೆ ಕೊರೊನಾ ದೃಢಪಟ್ಟಿದ್ದುದರಿಂದ ಅವರಿಗೆ ಡಿ.ಎಡ್ ಕಾಲೇಜಿನಲ್ಲಿ ಪ್ರತ್ಯೇಕ ಪರೀಕ್ಷಾ ಕೊಠಡಿ ವ್ಯವಸ್ಥೆಗೊಳಿಸಲಾಗಿತ್ತು
ನಾಲ್ವರ ಪೈಕಿ ಇಬ್ಬರು   ಹಾಜರಾಗಿದ್ದು ಇನ್ನಿಬ್ಬರು ಗೈರು ಹಾಜರಾಗಿದ್ದರು.ಇವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.
 ಮಾನವ ಸ್ಪಂದನ ತಂಡದ ಸದಸ್ಯರು ಸಹಕರಿಸಿದರು.
error: Content is protected !!