ಬೆಳ್ತಂಗಡಿ ದ್ವಿಚಕ್ರ ವಾಹನ ಕಳ್ಳರ ಬಂಧನ

ಬೆಳ್ತಂಗಡಿ :ತಾಲೂಕಿನ ವಿವಿಧೆಡೆ  ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಹಳೆಪೇಟೆಯ  ಅರುಣ್ ಶೆಟ್ಟಿ (30)  ಗುರಿಪಳ್ಳದ ಹೇಮಂತ್ ಬಿರ್ವ ಯಾನೆ ಹರ್ಷಿತ್(20), ಉಜಿರೆಯ ಸಂಪತ್ ಯಾನೆ ಶ್ಯಾಮ್(24) ಎಂಬವರನ್ನು  ಬಂಧಿಸಲಾಗಿದೆ
ವಂದನಾ ಎಂಬವರ ದ್ವಿಚಕ್ರ ವಾಹನವು ಮೇ 5 ರಂದು ನಾಪತ್ತೆಯಾಗಿದೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದರು
. ಸೆ17ರಂದು  ಉಜಿರೆ ಗ್ರಾಮದ ‌ಪಂಚರಿಕಾಡು ರಬ್ಬರ್ ತೋಟದಲ್ಲಿ ಮೂವರು ಯುವಕರು ಸ್ಕೂಟರ್ ವಾಹನವನ್ನು ಬಿಚ್ಚುತ್ತಿರುವ ಬಗ್ಗೆ ಬಂದು ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಜಿರೆಯ ಗ್ಯಾರೇಜ್ ನಲ್ಲಿ ನಿಲ್ಲಿಸಿದ ಸ್ಕೂಟರ್ ಕಳ್ಳತನ ಮಾಡಿರುವುದು ಅದಲ್ಲದೆ ಬೇರೆ ಎರಡು ದ್ವಿಚಕ್ರ ವಾಹನ  ಕಳ್ಳತನ ಮಾಡಿ ಅದರ ಬಿಡಿಭಾಗಗಳನ್ನು   ಮಾರಾಟ ಮಾಡಲು ಯತ್ನಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್  ಸಂದೇಶ್.ಪಿ.ಜಿ‌ ಹಾಗೂ ಪಿಎಸ್ಐ‌ ನಂದ ಕುಮಾರ್ ನೇತೃತ್ವದಲ್ಲಿ    ಎಎಸ್ಐ ದೇವಪ್ಪ ,ಎಎಸ್ಐ ತೀಲಕ್, ಪಿಸಿಗಳಾದ ಪುಟ್ಟಸ್ವಾಮಪ್ಪ ,ಚರನ್ ರಾಜ್ ,ವೆಂಕಪ್ಪ, ಅಶೋಕ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
error: Content is protected !!