
ಬೆಳ್ತಂಗಡಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೆಳ್ತಂಗಡಿ ಬಿಜೆಪಿ ಮಂಡಲ ವತಿಯಿಂದ ಆ. 18ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ವಠಾರದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ, ಪ್ರಶಾಂತ್ ಪಾರೆಂಕಿ, ಬಿಜೆಪಿ ನಾಯಕರಾದ ಜಯಂತ್ ಕೋಟ್ಯಾನ್, ಜಯಾನಂದ ಕಲ್ಲಾಪು, ಸುಂದರ್ ಹೆಗ್ಡೆ ಬಿ., ಕೊರಗಪ್ಪ ಗೌಡ, ವಿದ್ಯಾ ಶ್ರೀನಿವಾಸ್, ಚೇನ್ನಕೇಶವ ಮುಂಡಾಜೆ, ಸೀತಾರಾಮ್ ಬೆಳಾಲು, ಲಕ್ಷ್ಮಣ, , ವಿಜಯ್ ಗೌಡ, ಗಣೇಶ್ ನಾವೂರು, ಶಶಿಧರ್ ಕಲ್ಮಂಜ, ಉಮೇಶ್ ಕುಲಾಲ್, ಶಶಿರಾಜ್ ಶೆಟ್ಟಿ, , ಸಂತೋಷ್ ಜೈನ್ ಪಡಂಗಡಿ, ರಾಜೇಶ್ ಪ್ರಭು, ವಸಂತಿ, ರಂಜಿನಿ ಮುಂಡಾಜೆ, ಪ್ರದೀಪ್ ಕುವೆಟ್ಟು, ಚಂದ್ರಕಾಂತ್ ನಿಡ್ಡಾಜೆ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.