
ಬೆಳ್ತಂಗಡಿ : ಗುರುವಾಯನಕೆರೆ ಬಳಿಯ ಪಿಲಿಚಾಮುಂಡಿ ಶಕ್ತಿನಗರ ರಸ್ತೆಯಲ್ಲಿ ಇರುವ ಖಾಸಗಿ ಕಂಪನಿಯ ವಿದ್ಯುತ್ ಸಬ್ ಸ್ಟೇಷನ್ ಬಳಿ ಅವಿವಾಹಿತ ಯುವಕನ ಶವ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪವಿರುವ ಯನೆಪೊಯೋ ವಿದ್ಯುತ್ ಸಬ್ ಸ್ಟೇಷನ್ ಜಾಗದ ಮುಂಭಾಗ ತಡೆಗೋಡೆ ಇರುವ ಇಳಿಜಾರು ಪ್ರದೇಶದಲ್ಲಿ ಜು.1 ರಂದು ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ ಅವರ ಪುತ್ರ ಮುಸ್ತಾಕ್ (27)ಎಂಬವರ ಶವ ಪತ್ತೆಯಾಗಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಅವರು ಜೂ. 30 ರಂದು ಕಲ್ಲೇರಿಯಿಂದ ಮದ್ದಡ್ಕಕ್ಕೆ ಲಾರಿ ಬಳಿಗೆ ಆತನ ತಮ್ಮ ಮುನಾಸೀರ್ ಬೈಕ್ ನಲ್ಲಿ ಬಿಟ್ಟು ಹೋಗಿದ್ದರು. ಆದರೆ ಇಂದು ಆತನ ಶವ ಪತ್ತೆಯಾದ ಸ್ಥಿತಿಯನ್ನು ಕಂಡು ಆತನ ತಂದೆ ಶರೀಫ್ ನನ್ನ ಮಗನನ್ನು ಕೊಲೆ ಮಾಡಿ ತಂದು ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತದೇಹ ಸಿಕ್ಕ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ ಗಾರ್ಡ್ ಇರುವುದಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ ಐ ಆನಂದ್, ಸೋಕೋ ತಂಡ, ಕುವೆಟ್ಟು ಗ್ರಾ. ಪಂ. ಪಿಡಿಓ ಇಮ್ತಿಯಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.