ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ರಸ್ತೆ ಬದಿಯ ಮರ ತುಂಡರಿಸುವ ವೇಳೆ ನಿರ್ಲಕ್ಷ್ಯ:, ಅಂಗಡಿ ಕಟ್ಟಡದ ಮೇಲೆ ಉರುಳಿ ಬಿದ್ದ ಮರ , ಅದೃಷ್ಟವಶಾತ್ ತಪ್ಪಿದ ಅನಾಹುತ:

 

 

ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತಿದ್ದು, ಅಗಲೀಕರಣಕ್ಕಾಗಿ ರಸ್ತೆ ಬದಿಯ ಮರಗಳನ್ನು ತುಂಡರಿಸುವ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ನಡೆಯುತ್ತಿದೆ. ಅದರೆ ಈ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ತೀರಾ ನಿರ್ಲಕ್ಷ್ಯವನ್ನು ಸಂಬಂಧ ಪಟ್ಟ ಗುತ್ತಿಗೆದಾರರು ಮಾಡುತಿದ್ದು ಇದಕ್ಕೆ ಉದಾಹರಣೆ ಎಂಬಂತೆ ಸಂತೆಕಟ್ಟೆ ಬಳಿ ಬೃಹತ್ ಗಾತ್ರದ ಮರವನ್ನು ತುಂಡರಿಸುವ ವೇಳೆ ಮರ ಸಮೀಪದ ಅಂಗಡಿಗಳಿರುವ ಕಟ್ಟಡಕ್ಕೆ ಉರುಳಿ ಬಿದ್ದು ಹಾನಿ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ,

 

 

ಈಗಾಗಲೇ ಭಾರೀ ಸಂಖ್ಯೆಯಲ್ಲಿ ವಾಹನ ಸೇರಿದಂತೆ ಜನ ಸಾಮಾನ್ಯರು ಸಂಚರಿಸುತ್ತಿರುವ ಹೆದ್ದಾರಿಯಲ್ಲಿ ಮರ ತೆರವು ವೇಳೆ ಸೂಕ್ತ ಸುರಕ್ಷತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಬೇಕಾಗಿದ್ದು, ಬೃಹತ್ ಗಾತ್ರದ ಮರದ ಗೆಲ್ಲುಗಳನ್ನು ತುಂಡರಿಸಿ ನಂತರ ಮರ ಉರುಳಿಸುವ ಬದಲು ಕೆಲಸ ಬೇಗ ನಡೆಯಬೇಕು ಎಂಬ ನಿಟ್ಟಿನಲ್ಲಿ ಆವಸರದಲ್ಲಿ  ಈ ರೀತಿ ಕಾಮಗಾರಿ ನಡೆಸುವ ವೇಳೆ ಅನಾಹುತ ಪ್ರಾಣ ಹಾನಿ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತಿದ್ದಾರೆ.ಅದಲ್ಲದೇ ಮುಂದೆ ಇಂತಹ ಅಪಾಯಗಳು ಸಂಭವಿಸದಂತೆ ಸೂಕ್ತ  ಎಚ್ಚರಿಕೆ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.

error: Content is protected !!