ಲಾಯಿಲ ಗ್ರಾಮ ಪಂಚಾಯತ್ ,ರಸ್ತೆ ಬದಿ ಕಸ ಬಿಸಾಡಿದ್ದಕ್ಕೆ ಮತ್ತೆ ಬಿತ್ತು ದಂಡ:

 

 

ಬೆಳ್ತಂಗಡಿ: ಕಳೆದ ಎರಡು ದಿನಗಳ ಹಿಂದೆಯಷ್ಟೆ ರಾಶಿ ರಾಶಿ ಕಸ ರಸ್ತೆ ಬದಿ ಸುರಿದು ಹೋದ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಬಿಸಾಕಿದವರ ವಿಳಾಸ ಪತ್ತೆ ಹಚ್ಚಿ ಎರಡು ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ ಮರುದಿನವೇ ಮತ್ತೆ ಅದೇ ಜಾಗದಲ್ಲಿ ಕಸ ಹಾಗೂ ತಿಂದು ಉಳಿದ ಆಹಾರ ಪದಾರ್ಥಗಳನ್ನು ಬಿಸಾಡಿ ಹೋಗಿದ್ದು , ಪರಿಶೀಲಿಸಿದಾಗ ಸ್ಥಳೀಯ ಪ್ಲಾಟ್ ಒಂದರಲ್ಲಿ ವಾಸಿಸುತ್ತಿರುವ ಮನೆಯ ಮಾಹಿತಿ ಸಿಕ್ಕಿದ್ದು , ಈ ಬಗ್ಗೆ ಅವರಿಗೆ ಪಂಚಾಯತ್ ನ ಪಿಡಿಒ ತಾರಾನಾಥ್ ನಾಯ್ಕ, ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಪೋನ್ ಮಾಡಿದ ವೇಳೆ ಕಸ ಬಿಸಾಡಿರುವುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.ಅದಲ್ಲದೇ ಪಂಚಾಯತ್ ವಿಧಿಸಿದ ಒಂದು ಸಾವಿರ ರೂ ದಂಡನೆ ಹಣವನ್ನು ಕಟ್ಟಿದ್ದಾರೆ.ಮುಂದೆ ಈ ರೀತಿ ಮಾಡಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಪಂಚಾಯತ್ ನೀಡಿದೆ.

error: Content is protected !!