
ಬೆಳ್ತಂಗಡಿ : ಗ್ಯಾಸ್ ಕಚೇರಿಯಲ್ಲಿ ನಾನ ರೀತಿಯ ಗ್ಯಾಸ್ ಸಮಸ್ಯೆಗಳಿಂದ ಮ್ಯಾನೇಜರ್ ಮತ್ತು ಗ್ರಾಹಕರ ನಡುವೆ ಗಲಾಟೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿರುವ ಶ್ರೀ ಮಂಜು ಇಂಡೇನ್ ಗ್ಯಾಸ್ ಕಚೇರಿಯಲ್ಲಿ ಗ್ಯಾಸ್ ಬುಕ್ ಮಾಡಿ ದಿನಗಳುರುಳಿದರೂ ಸರಿಯಾದ ರೀತಿಯ ಸ್ಪಂದನೆಯನ್ನು ನೀಡಿಲ್ಲ ,ಪೋನ್ ರಿಸೀವ್ ಮಾಡುವುದಿಲ್ಲ ಕಛೇರಿಗೆ ಬಂದು ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡದೆ ಸತಾಯಿಸುತಿದ್ದಾರೆ ಎಂದು ಏಜೆನ್ಸಿ ವಿರುದ್ಧ ಗ್ರಾಹಕರು ಆಸಾಮಾಧಾನ ಹೊರಹಾಕಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಲಾಟೆ ಹೆಚ್ಚಾಗುತಿದ್ದಂತೆ ಮ್ಯಾನೇಜರ್ ಶಿವಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡದಂತೆ ಸಮಾಧಾನ ಪಡಿಸಿದ್ದಾರೆ.
ಕೆಲ ಗ್ರಾಹಕರು ಗ್ಯಾಸ್ ಬುಕ್ ಮಾಡಿದ್ದರೂ ಬೇರೆಯವರು ಅದನ್ನು ಪಡೆದುಕೊಂಡಿರುವ ಆರೋಪ ಕೂಡ ಕೇಳಿಬಂದಿದೆ. ಕೆಲವರು ಬುಕ್ ಮಾಡಿದ್ರೂ ಗ್ಯಾಸ್ ನೀಡುವುದಿಲ್ಲ.ಅದಲ್ಲದೆ ದುಪ್ಪಟ್ಟು ಹಣಕ್ಕೆ ಗ್ಯಾಸ್ ಮಾರಾಟ ಮಾಡುತಿದ್ದಾರೆ ಎಂಬ ಆರೋಪವನ್ನು ಗ್ರಾಹಕರು ಮಾಡುತಿದ್ದಾರೆ.