
ಬೆಳ್ತಂಗಡಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜ 25 ಭಾನುವಾರ ಬೆಳ್ತಂಗಡಿಗೆ ಆಗಮಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಗಾಂಧಿ ಗ್ರಾಮ ಪುರಸ್ಕೃತ ಕಾಶಿಪಟ್ನ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.10.30 ಕ್ಕೆ ಪಂಚಲಿಂಗೇಶ್ವರ ದೇವಸ್ಥಾನ ಕೇಳ ಕಾಶಿಪಟ್ನ ದೇವಸ್ಥಾನದ ರಾಜಗೋಪುರ ಉದ್ಘಾಟನೆ, ಸಭಾಭವನ ಮತ್ತು ಅನ್ನಛತ್ರ ಕಟ್ಟಡಗಳಿಗೆ ಶಿಲಾನ್ಯಾಸ,11 ಗಂಟೆಗೆ ಕುಕ್ಕೇಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನೆ, ಹಾಗೂ ಹಕ್ಕು ಪತ್ರ ವಿತರಣೆ, 12.30 ಕ್ಕೆ ಕನ್ಯಾಡಿ ಗ್ರಾಮದ ಪಡ್ಪು,ಕನ್ಯಾಡಿ ಶಾಲೆ ರಸ್ತೆ, ಶಾಲೆಯಿಂದ ಮೂಡಬೆಟ್ಟು ಭೀಮಂಡೆ ರಸ್ತೆ, ಕನ್ಯಾಡಿ ಬೊಳಿಯಂಜಿ ರಸ್ತೆ ಉದ್ಗಾಟನಾ ಕಾರ್ಯಕ್ರಮ ನಡೆಯಲಿದೆ.