ಜ 23 ರಿಂದ ಫೆ01, ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರು, ಜಾತ್ರಾ ಮಹೋತ್ಸವ: ಶ್ರೀ ಕೃಷ್ಣ ಕಥಾಮೃತ, ಪ್ರವಚನ ಮಾಲಿಕೆ,ಭೀಷ್ಮೈಕಾದಶಿ ಪ್ರತಿಷ್ಠಾವರ್ಧಂತ್ಯುತ್ಸವ: ಜ.29ರಂದು ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

 

 

ಬೆಳ್ತಂಗಡಿ :ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ವತಿಯಿಂದ ಜರಗಲಿರುವ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ನಾನಾ ಕಾರ್ಯಕ್ರಮಗಳು ಜ‌ 23ರಿಂದ ಫೆ.1ರವರೆಗೆ ಜರಗಲಿವೆ ಎಂದು ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಹೇಳಿದರು.
ಅವರು ಬುಧವಾರ
ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜ .23ರಿಂದ 30ರವರೆಗೆ ಪ್ರತಿದಿನ ಸಂಜೆ 6.30 ಗಂಟೆಗೆ ಡಾ.
ವೀಣಾ ಬನ್ನಂಜೆ ಅವರಿಂದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ ಜರಗಲಿದೆ.
23ರಂದು ಸಂಜೆ 4 ಗಂಟೆಗೆ‌ ಡಾ.ವೀಣಾ ಬನ್ನಂಜೆ ಆಗಮನ,ಪೌರ ಸ್ವಾಗತ ಸಂಜೆ 5:30 ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯುವುದು.
29ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿಷ್ಣು ಸಹಸ್ರನಾಮ ಯಜ್ಞ ,30 ರಂದು ಸಾಮೂಹಿಕ ತುಳಸಿ ನಾಮಾರ್ಚನೆ, ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಶ್ರೀ ಕೃಷ್ಣಾಮೃತ ಪ್ರವಚನ ಮಾಲಿಕೆಯ ಸಮಾರೋಪ ಜರಗಲಿರುವುದು.
ಜ.31ರಂದು ಪ್ರತಿಷ್ಠ ವರ್ಧಂತಿ ಅಂಗವಾಗಿ ಗಣ ಹೋಮ, ಪಂಚ ವಿಂಶತಿ ಕಲಶ, ನವಕ ಕಲಶ ಮೊದಲಾದ ಕಾರ್ಯಕ್ರಮಗಳು ಜರಗಲಿವೆ .ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆ ಸಂಜೆ ಕಮ್ಮಟ ಭಜನೋತ್ಸವ, ದೇವರ ಉತ್ಸವ, ಬಲಿ, ಅಷ್ಟಾವಧಾನ ಸೇವೆ ಇತ್ಯಾದಿ ನಡೆಯಲಿದೆ.
ರಾತ್ರಿ 8.30 ಕ್ಕೆ ಸಭಾ ಕಾರ್ಯಕ್ರಮ ಜರಗಲಿದ್ದು ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಅಧ್ಯಕ್ಷತೆ ವಹಿಸುವರು.ಮಾಜಿ ಸಚಿವ ಕೆ.ಗಂಗಾಧರ ಗೌಡ,ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಎಸ್ ಕೆ ಡಿ ಆರ್ ಡಿ ಪಿಯ ಸಿಇಒ ಅನಿಲ್ ಕುಮಾರ್ ಎಸ್ .ಎಸ್.,
ಎಆರ್ ಟಿಒ ಚರಣ್ ಕೆ., ಧಾರ್ಮಿಕ ಪರಿಷತ್ ಸದಸ್ಯ ಯೋಗೇಶ್ ಕುಮಾರ್ ನಡಕ್ಕರ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತಾ ಶಿವರಾಂ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳೀಧರ ಬಲಿಪ, ಉದ್ಯಮಿ ಮಾಧವ ಜೋಗಿತ್ತಾಯ ಮತ್ತಿತರರು ಉಪಸ್ಥಿತರಿರುವರು.
ಫೆ.1ರಂದು ಗಣ ಹೋಮ, ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಸಂಜೆ ದುರ್ಗಾಪೂಜೆ, ರಂಗ ಪೂಜೆ ಇತ್ಯಾದಿ ಜರಗಲಿದೆ
ಸಂಜೆ 7:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಎಂಎಲ್‌ ಸಿಗಳಾದ ಪ್ರತಾಪ ಸಿಂಹ, ನಾಯಕ್ ಕಿಶೋರ್ ಕುಮಾರ್, ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯ ಇದರ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಎಸ್., ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ನ ನಿಕಟಪೂರ್ವ ಅಧ್ಯಕ್ಷ ಎ.ಬಿ.ಉಮೇಶ್,ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪಗೌಡ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ರಾಘ್ನೇಶ್ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಹಾಗೂ ದೇವಸ್ಥಾನದ ಪದಾಧಿಕಾರಿಗಳಾದ ಹರೀಶ್ ಸಾಲಿಯಾನ್,ತನುಜಾ ಶೇಖರ್,ದರ್ಣಪ್ಪ ಮೂಲ್ಯ, ಸೂರ್ಯನಾರಾಯಣ ಭಟ್,ಎ.ಬಿ. ಉಮೇಶ್, ಹರೀಶ್ ಕಾರಿಂಜ, ಉಪಸ್ಥಿತರಿದ್ದರು.

ಜ.29ರಂದು ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ

ಜ. 29ರಂದು ಸಂಜೆ 4:30 ರಿಂದ ಬೃಹತ್ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಜರಗಲಿರುವುದು. ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ರಾಷ್ಟ್ರೀಯ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಮಣ್ಯ ಭಟ್, ಕೆಎಂಸಿ ವೈದ್ಯ ಡಾ. ಚಕ್ರಪಾಣಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶಸ್ತ್ರಚಿಕಿತ್ಸಾ ತಜ್ಞ ಡಾ.ಈಶ್ವರ ಕೀರ್ತಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಪೂರನ್ ವರ್ಮ, ಉದ್ಯಮಿ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಡಿ.ಪುಷ್ಪಗಿರಿ ಉಪಸ್ಥಿತರಿರುವರು.

error: Content is protected !!