ಮಕ್ಕಳಿಗೆ ಧರ್ಮದ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯತೆ ಇದೆ, ಶಶಿಧರ್ ಶೆಟ್ಟಿ ಅಭಿಪ್ರಾಯ : ಗುರುವಾಯನಕೆರೆ ಹಿಂದೂ ಸಂಗಮ ಕಾರ್ಯಕ್ರಮ, ಸಾಯಿರಾಂ ಫ್ರೆಂಡ್ಸ್ ಕಾರ್ಯಕ್ಕೆ ಶ್ಲಾಘನೆ:

 

 

ಬೆಳ್ತಂಗಡಿ :ಧರ್ಮದ ಕಾರ್ಯದಲ್ಲಿ ಜಾತಿ ಅಡ್ಡಬರಬಾರದು ಎಲ್ಲ ಜಾತಿಯವರು ಒಂದೆಡೆ ಒಟ್ಟಾಗಿ ಸೇರಿ ಇಂತಹ ದೊಡ್ಡ ಕಾರ್ಯಕ್ರಮ ಮಾಡುವುದೇ ನಿಜವಾದ ಹಿಂದುತ್ವ ವಾಗಿದ್ದು,ಈ ನಿಟ್ಟಿನಲ್ಲಿ ಇವತ್ತಿನ ಹಿಂದೂ ಸಂಗಮ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ.ಎಂದು ಉದ್ಯಮಿಗಳು, ಸಮಾಜ ಸೇವಕರಾದ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಭಿಪ್ರಾಯ ಪಟ್ಟರು. ಅವರು ಗುರುವಾಯನಕೆರೆ ನವಶಕ್ತಿ ಮೈದಾನದಲ್ಲಿ ಜ 18 ರಂದು ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಮಂಡಲ ಇದರ ವತಿಯಿಂದ ಕುವೆಟ್ಟು, ಓಡಿಲ್ನಾಳ, ಕಳಿಯ, ನ್ಯಾಯತರ್ಪು, ಮೇಲಂತಬೆಟ್ಟು ಮತ್ತು ಮುಂಡೂರು ಗ್ರಾಮಗಳ ‘ಹಿಂದೂ ಸಂಗಮ’ ಬೃಹತ್ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

 

ನಮ್ಮ ಆಚರಣೆ, ಸಂಪ್ರದಾಯ, ಧರ್ಮಗಳ ವಿಚಾರಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಇನ್ನಷ್ಟು ಆಗಬೇಕಾಗಿದೆ. ಈ ಕೆಲಸಗಳು ಪ್ರತೀ ಮನೆಯಲ್ಲೂ ನಡೆಯಬೇಕು. ಪ್ರಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ, ಪ್ರತಿ ಮನೆಯಲ್ಲೂ ಭಜನಾ ಸಂಕೀರ್ತನೆ ನಡೆಯಬೇಕು ಈ ಮೂಲಕ ಸಂಸ್ಕಾರಯುತ ಬದುಕು ಕಲಿಸಿ ಮಕ್ಕಳನ್ನು ಸಮಾಜದ ಆದರ್ಶ ವ್ಯಕ್ತಿಗಳನ್ನಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕಾರ್ಯಕ್ರಮ ವ್ಯವಸ್ಥಿತ ರೀತಿಯಲ್ಲಿ ಯಶಸ್ವಿಯಾಗಿ ನಡೆಯಲು ಗುರುವಾಯನಕೆರೆ ಸಾಯಿರಾಂ ಫ್ರೆಂಡ್ಸ್ ಹಾಗೂ ಇನ್ನಿತರರ ಕಾರ್ಯ ಶ್ಲಾಘನೀಯ,ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

 

 

ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದೂ ಧರ್ಮ, ಸಮಾಜ, ಪರಂಪರೆ, ಸಂಸ್ಕೃತಿಯ ಮೇಲೆ ನಿರಂತರ ಅಕ್ರಮಣ, ದೌರ್ಜನ್ಯ ನಡೆದರೂ, ನಮ್ಮ ಅಸ್ಮಿತೆ ಇಂದಿಗೂ ಉಳಿದುಕೊಂಡಿದೆ ಎಂದರೆ ಇದಕ್ಕೆ ನಮ್ಮ ಸಂಘಟನೆಗಳು ಕಾರಣವಾಗಿದೆ. ಸನಾತನ ಹಿಂದೂ ಧರ್ಮ ಸಂಘಟಿತರಾದರೆ, ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ವಿಶ್ವ ಉಳಿಯ ಬೇಕಾದರೆ, ದೇಶ ಉಳಿಯಬೇಕು, ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಸದೃಢ ಹಿಂದೂ ಸಮಾಜ ಬೆಳೆಯಲು ಸಾಧುಸಂತರು, ಜ್ಞಾನಿಗಳು, ಧಾರ್ಮಿಕ ಮುಖಂಡರು ಮಾರ್ಗದರ್ಶನ ನೀಡಬೇಕು. ಪ್ರತಿ ಗ್ರಾಮ, ಮನೆ, ಮನೆಗಳಲ್ಲಿ ಹಿಂದೂ ಸಂಗಮ ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ವಕ್ತಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸಂಯೋಜಕ ವೀರೇಶ್ ಜಿ. ಮಾತನಾಡಿ, ಹಿಂದು ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಸಮಾಜದ ಸಂರಕ್ಷಣೆ ಹಿಂದೂ ಸಂಗಮದ ಮುಖ್ಯ
ಉದ್ದೇಶವಾಗಿದ್ದು, ಹಿಂದೂ ರಾಷ್ಟ್ರವನ್ನು ಮತ್ತೆ, ಮತ್ತೆ ನೆನಪಿಸುವ ಕಾರ್ಯ ಈ ಸಮಾವೇಶದ ಮೂಲಕ ನಡೆಯುತ್ತದೆ ಎಂದರು. ಹಿಂದೂ ಸಂಘಟನೆ ಮೂಲಕ ರಾಷ್ಟ್ರ ಪರಮ ವೈಭವ ಕಾಣಬೇಕು, ಪ್ರತಿಯೊಬ್ಬ ಹಿಂದು ಸಂಘಟನೆಯಾಗಿ ಹಿಂದೂ ಸಮಾಜದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಕಿರಾತ ಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೊರ್ಯಾರು, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಮಾನಂದ ಸಾಲಿಯಾನ್, ಪಾಡ್ಯಾರು ಬೀಡು ಪ್ರವೀಣ್ ಕುಮಾರ್, ಗುರುವಾಯನಕೆರೆ ಅರಮನೆ ಬೆಟ್ಟ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು,ನಾಳ ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾ‌ರ್, ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ, ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಪೂಜಾರಿ, ಉದ್ಯಮಿ ನಾಣ್ಯಪ್ಪ ಪೂಜಾರಿ, ಸಂಪತ್ ಸುವರ್ಣ ಉಪಸ್ಥಿತರಿದ್ದರು.
ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀಮತಿ ಪ್ರೀತಿ ರಾವ್ ಬೆಳ್ತಂಗಡಿ, ದಾಮೋದರ ಬಂಗೇರ ಸವಣಾಲು, ಗಂಗಾಧ‌ರ್ ರಾವ್ ಕೆವುಡೇಲು, ವಸಂತ ಮಜಲು ಕಳಿಯ, ಸೇಸಪ್ಪ ಸಾಲಿಯಾನ್ ಬಾರ್ಯ, ಮನೋಹರ ಶೆಟ್ಟಿ ಬಾರ್ಯ, ಪುಷ್ಪರಾಜ್‌ ಶೆಟ್ಟಿ ಬೆಳ್ತಂಗಡಿ, ಶ್ರೀಮತಿ ಜಯ ಅನಂತಕೃಷ್ಣ ಭಟ್ ಕೊಯ್ಯರು, ರಕ್ಷಿತ್‌ ಪಣೆಕ್ಕರ. ಕಾರ್ಯದರ್ಶಿ ವಸಂತ ಮರಕಡ ಮಚ್ಚಿನ, ಜೊತೆ ಕಾರ್ಯದರ್ಶಿಗಳಾದ ತುಕರಾಮ ಬಿ., ಬೆಳ್ತಂಗಡಿ, ಶ್ರೇಯಾ ಶೆಟ್ಟಿ ಗುರುವಾಯನಕೆರೆ, ಕು| ಸುರಕ್ಷಾ ಆಚಾರ್ಯ ಲಾಯಿಲ, ದಯಾನಂದ ರೈ ಸವಣಾಲು ಮನೋಹರ ಗೌಡ ಮುಗೇರಡ್ಕ, ವೀರೇಂದ್ರ ಕುಮಾರ್ ಮಡಂತ್ಯಾರು, ರೋಹಿತ್ ಶೆಟ್ಟಿ ಕುಪ್ಪೆಟ್ಟಿ, ಕೋಶಾಧಿಕಾರಿ ಸ್ವಸ್ತಿಕ್ ಬೆಳ್ತಂಗಡಿ , ತಾಲೂಕು ಸಂಯೋಜಕರಾದ ಅನಿಲ್
ಕುಮಾರ್ ಯು. ಪ್ರಮುಖರಾದ ಭುವನೇಶ್ ಗೇರುಕಟ್ಟೆ, ಆನಂದ ಶೆಟ್ಟಿ ಐಸಿರಿ,
ವಸಂತ ಶೆಟ್ಟಿ ಮಠ, ಅಶೋಕ್‌ ಆಚಾರ್ಯ ಲಕ್ಷ್ಮಿಕಾಂತ್ ಶೆಟ್ಟಿ ಮೂಡೈಲ್, ಜಯರಾಮ್ ಶೆಟ್ಟಿ ಕಿನ್ನಿಗೋಳಿ, ಸಂದೇಶ್ ಅನಿಲ,
ಹರೀಶ್ ಬಂಗೇರ, ಪ್ರಶಾಂತ್ ಆಚಾರ್ಯ, ಸುಕೇಶ್ ಕಡಂಬು,

ಕುಶಾಲಪ್ಪ ಗೌಡ ನ್ಯಾಯತರ್ಪು, ಸಂದೀಪ್ ಗಾಣಿಗ ನಾಳ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಲೋಕೇಶ್‌ ಆಚಾರ್ಯ, ಸುಂದರ ನಾಯ್ಕ, ಗೋಪಾಲ ಬನ, ಸೋಮಣ್ಣಗೌಡ ನಾಳ, ಪ್ರದೀಪ್ ಶೆಟ್ಟಿ ಪಾಡ್ಯಾರ್,
ಮನೋಹ‌ರ್ ಕೇದಳಿಕೆ, ಗಿರಿಜಾ ನಲೆತ್ತಾರು ,ಶಾಂತಾ ಬಂಗೇರ, ಶ್ರೀಮತಿ ಸೌಮ್ಯ ನವೀನ್, ಶ್ರೀಮತಿ ಮಮತಾ ಶೆಟ್ಟಿ ನಾಳ,ಭಾರತೀ ಆಚಾರ್ಯ, ಗೀತಾ ಎಸ್. ಶೆಟ್ಟಿ ಮಾಪಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಿದ್ದರು. ಆರಂಭದಲ್ಲಿ ಗೋಪೂಜೆ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು. ಮಂಡಲ ಸಂಯೋಜಕ ಚಿದಾನಂದ ಇಡ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿ. ಪ್ರಭಾಕರ ಉಪ್ಪಡ್ಕ ಧನ್ಯವಾದವಿತ್ತರು.

error: Content is protected !!