ವೇಣೂರು, ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

 

 

 

ಬೆಳ್ತಂಗಡಿ : ವೇಣೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಇರ್ವತ್ತೂರು ಗ್ರಾಮದ ಪರಾರಿಯ ಸರಕಾರಿ ಜಾಗದಲ್ಲಿ ಜ.10 ರಂದು ಬೆಳಗ್ಗೆ 10 ಗಂಟೆಗೆ ಸುಮಾರು 3 ರಿಂದ 4 ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಸ್ಥಳೀಯರಿಗೆ ಪತ್ತೆಯಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ವೇಣೂರು ವಲಯ ಅರಣ್ಯಾಧಿಕಾರಿ ಭರತ್.ಯು.ಜಿ, ಡಿ.ಆರ್.ಎಫ್ ಅಶ್ವಿತ್, ಗಸ್ತು ಅರಣ್ಯ ಪಾಲಕ ಸುರೇಶ್ ಮತ್ತು ದಿವಕರ್ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು. ಸರಕಾರಿ ಪಶು ವೈದ್ಯರು ಚಿರತೆಯ ಶವಪರೀಕ್ಷೆಯನ್ನು ಜ.11 ರಂದು ಮಾಡಿದ ಬಳಿಕ ಚಿರತೆ ಮೃತಪಟ್ಟ ಬಗ್ಗೆ ನಿಖರವಾದ ಮಾಹಿತಿ ತಿಳಿದುಬರಬೇಕಾಗಿದೆ.

error: Content is protected !!