ನುಡಿದಂತೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ: ಜನಸ್ಪಂದನ ಸಭೆಯ ಫಲಶ್ರುತಿ: 108  ಹಕ್ಕುಪತ್ರ , 54 ನಡಾವಳಿ ವಿತರಣೆ:

 

 

 

ಬೆಳ್ತಂಗಡಿ: ತಾಲೂಕಿನ ಎಂಬತ್ತೊಂದು ಗ್ರಾಮಗಳ ನಲ್ವತ್ತೆಂಟು ಪಂಚಾಯತ್ ಮಟ್ಟದ ಜನಸ್ಪಂದನಾ ಸಭೆ ಮುಗಿದು ಹದಿನೈದು ದಿನದಲ್ಲೇ  ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅಹವಾಲು ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ. ಇದೀಗ ಸುಮಾರು 108 ಮಂದಿ‌ ಅರ್ಹ ಫಲಾನುಭವಿಗಳಿಗೆ 94ಸಿ , ಹಕ್ಕುಪತ್ರಗಳು ಹಾಗೂ 54 ನಡವಳಿಯನ್ನು  ಜ10 ಶನಿವಾರ ವಿತರಿಸಿದ್ದಾರೆ.ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಜನಸ್ಪಂದನಾ ಸಭೆಯಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದಿದ್ದರು ಈ ಬಗ್ಗೆ ಅಧಿಕಾರಿಗಳಲ್ಲಿ ಕೆಲವೊಂದು ಬಗೆಹರಿಸಬಹುದಾದ ಸಮಸ್ಯೆಗಳಿಗೆ ಹದಿನೈದು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಅದರಂತೆ ಇವತ್ತು ಅರ್ಹರಿಗೆ ಹಕ್ಕು ಪತ್ರ  ಸೇರಿದಂತೆ ನಡಾವಳಿಯನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ  ಎಂದರು.

error: Content is protected !!