
ಬೆಳ್ತಂಗಡಿ : ವನ್ಯಜೀವಿ ವಿಭಾಗದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಹುಲಿ ಗಣತಿ ಪ್ರಕ್ರಿಯೆ ಪ್ರಾರಂಭದ ಹಿನ್ನೆಲೆಯಲ್ಲಿ ಜ.5 ರಿಂದ ಗಡಾಯಿಕಲ್ಲು, ನೇತ್ರಾವತಿ ಪೀಕ್,ಬಂಡಾಜೆ ಫಾಲ್ಸ್, ಬೊಳ್ಳೆ ಫಾಲ್ಸ್ ,ಕಡಮ ಗುಂಡಿ ಫಾಲ್ಸ್ ಗಳಿಗೆ ಕೆಲವು ಸಮಯಗಳವರೆಗೆ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಜ.5 ರಿಂದ ಹುಲಿಗಣತಿ ಬೆಳ್ತಂಗಡಿ ವನ್ಯಜೀವಿ ವಿಭಾಗದಿಂದ ಆರಂಭ ಮಾಡಲಿರುವ ಕಾರಣದಿಂದ ಚಾರಣ ಪ್ರಿಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಚಾರಣ ಪ್ರಿಯರಿಗೆ ನೇತ್ರಾವತಿ ಪೀಕ್ ಮತ್ತು ಬಂಡಾಜೆ ಫಾಲ್ಸ್ ಜ.13 ರಿಂದ ಆರಂಭವಾಗಲಿದ್ದು. ಗಡಾಯಿಕಲ್ಲು, ಬೊಳ್ಳೆ ಫಾಲ್ಸ್, ಕಡಮ ಗುಂಡಿ ಜ.14 ರಿಂದ ಪ್ರವೇಶಗಳು ಆರಂಭವಾಗಲಿದೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಆರ್.ಎಫ್.ಒ ಶರ್ಮಿಷ್ಠ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.