
ಬೆಳ್ತಂಗಡಿ: ಶ್ರೀರಾಮನ ಹೆಸರನ್ನಿಟ್ಟು ಜನರಿಗೆ ವಂಚಿಸಿ ಮೂರು ನಾಮ ಹಾಕಿದ್ದಾರೆ, ಪವಿತ್ರ ರಾಮ ದೇವರ ಹೆಸರಿಗೆ ಕಳಂಕ ತಂದಿದ್ದಾರೆ ಮೂವತ್ತು ಕೋಟಿ ಹಣ ವಂಚನೆ ಮಾಡಿದ್ದಾರೆ. ದಯವಿಟ್ಟು ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಸ್ಥಳೀಯರೊಬ್ಬರು ಆಕ್ರೋಶ ಹೊರಹಾಕಿದ ಘಟನೆ ಜನಸ್ಪಂದನ ಸಭೆಯಲ್ಲಿ ನಡೆದಿದೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತ್, ಇಲಾಖಾ ಮಟ್ಟದ ಜನಸ್ಪಂದನ ಸಭೆಯು ಜ 02 ರಂದು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ನಡೆಯಿತು. ಈ ವೇಳೆ ಸ್ಥಳೀಯರೊಬ್ಬರು ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಜನರಿಗೆ ವಂಚಿಸಿದೆ. ಅಧಿಕ ಬಡ್ಡಿಯ ಆಸೆಯಲ್ಲಿ ಸೊಸೈಟಿಯಲ್ಲಿ ಹಣ ಇಟ್ಡದ್ದಲ್ಲ ತನ್ನ ದಿನನಿತ್ಯದ ವ್ಯವಹಾರಕ್ಕಾಗಿ ಹಾಗೂ ಸ್ಥಳೀಯವಾಗಿ ಬೇರೆ ಬ್ಯಾಂಕ್ ಗಳು ಇಲ್ಲದೆ ಇದ್ದುದರಿಂದ ಹತ್ತಿರದ ಈ ಸೊಸೈಟಿಯಲ್ಲಿ ವ್ಯವಹಾರ ನಡೆಸಲಾಗಿದೆ. ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು ಸೇರಿದಂತೆ ಬಡವರು ದುಡಿದ ಹಣದಲ್ಲಿ ಕಷ್ಟಕಾಲದಲ್ಲಿ ಉಪಯೋಗವಾದೀತು ಎಂಬ ಯೋಚನೆಯಲ್ಲಿ ದಿನಂಪ್ರತಿ ಪಿಗ್ಮಿ ಕಟ್ಟಿದ್ದಾರೆ. ಅವರೆಲ್ಲರೂ ಹಣ ಕಳ್ಕೊಂಡಿದ್ದಾರೆ.ಅಂಸದಾಜು ಸುಮಾರು ₹ 30 ಕೋಟಿಯಷ್ಟು ಹಣ ವಂಚಿಸಿದ್ದಾರೆ ಎಂಬ ಆರೋಪ ಮಾಡಿದ ಅವರು ಮರ್ಯದಾ ಪುರುಷೊತ್ತಮ ಶ್ತೀ ರಾಮ ದೇವರ ಹೆಸರನ್ನಿಟ್ಡು ಜನರಿಗೆ ಮೋಸ ಮಾಡಿ ಮೂರು ನಾಮ ಹಾಕಿದ್ದಾರೆ, ರಾಮನ ಹೆಸರಿಗೆ ಕಳಂಕ ತಂದಿದ್ದಾರೆ,ಸಂಬಂಧಪಟ್ಡವರಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡದೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತಿದ್ದಾರೆ.ಈಗಾಗಲೇ ಬ್ಯಾಂಕ್ ವಂಚನೆ ಮಾಡಿದೆ ಎನ್ನುವ ವರದಿ ಕೂಡ ಬಂದಿದೆ.
ದಯವಿಟ್ಟು ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾಹಿತಿ ಪಡೆದ ಶಾಸಕರು ಈಗಾಗಲೇ ಕಾನೂತ್ಮಕ ಪ್ರಕ್ರಿಯೆಗಳು ನಡೆಯುತಿದ್ದು, ಯಾವ ರೀತಿ ವಂಚನೆ ನಡೆದಿದೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.ಎಂಬ ಉತ್ತರವನ್ನು ಅಧಿಕಾರಿಗಳು ನೀಡಿದರು.ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.