
ಬೆಳ್ತಂಗಡಿ: ಗ್ರಾಮ ಪಂಚಾಯತ್ ಸದಸ್ಯರು ರಸ್ತೆ ಬದಿ ಬಿಸಾಕಿದ ಕಸ ಸ್ವಚ್ಚಗೊಳಿಸಿ ಮಾದರಿ ಕಾರ್ಯ ಮಾಡಿದ್ದಾರೆ.
ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರುಗಳಾದ ಚಂದ್ರರಾಜ್ ಎಂ. ಪುರುಷೋತ್ತಮ್ ನೂಜೇಲು, ಹಾಗೂ ಜಯಾನಂದ ಗೋಳಿದಪಲ್ಕೆ ಇವರು ಬೆಳ್ತಂಗಡಿ ಸವಣಾಲು ರಸ್ತೆಯ ಕಲ್ಲಗುಡ್ಡೆ ಬಳಿ ರಸ್ತೆ ಬದಿ ಯಾರೋ ಪ್ಲಾಸ್ಟಿಕ್ ಸೇರಿದಂತೆ ಕಸ ತಂದು ಬಿಸಾಕಿದ್ದು ಇದನ್ನು ಹೆಕ್ಕಿ ಸ್ವಚ್ಚಗೊಳಿಸಿದ್ದಾರೆ. ಅದಲ್ಲದೇ ಯಾರೂ ಕೂಡ ರಸ್ತೆ ಬದಿ ತಂದು ಕಸ ಹಾಗೂ ತ್ಯಾಜ್ಯ ಬಿಸಾಡಬಾರದು ಒಂದು ವೇಳೆ ಕಸ ಬಿಸಾಡುವವರು ಕಂಡು ಬಂದರೆ ತಕ್ಷಣ ಪಂಚಾಯತ್ ಗೆ ಮಾಹಿತಿ ನೀಡಬೇಕು ಎಂಬ ಮನವಿ ಮಾಡಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.