ಇಂದಬೆಟ್ಟು , ಅಕ್ರಮ ಮರಳುಗಾರಿಕೆ, ತಡೆಯಲು ಅಧಿಕಾರಿಗಳು ವಿಫಲ: ಜನಸ್ಪಂದನ ಸಭೆಗೆ ಪೊಲೀಸರು ಗೈರಾಗಲು ಕಾರಣವೇನು ಗ್ರಾಮಸ್ಥರ ಪ್ರಶ್ನೆ:

 

ಬೆಳ್ತಂಗಡಿ: ಇಂದಬೆಟ್ಟು ರಸ್ತೆಯಲ್ಲಿ ರಾತ್ರಿ ಹಾಗೂ ಬೆಳಗ್ಗಿನ ಹೊತ್ತು ಅತೀ ವೇಗವಾಗಿ ಮರಳು ಸಾಗಾಟದ ಲಾರಿ,ಪಿಕಪ್ ಸಂಚರಿಸುತಿದ್ದು, ಶಾಲಾ ಮಕ್ಕಳು,ಡಿಪೋಗೆ ಹಾಲು ಕೊಂಡುಹೋಗುವವರು , ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಅಧಿಕೃತವಾಗಿ ಮರಳುಗಾರಿಕೆ ನಡೆಯುವುದಿದ್ದರೆ ಸಂಜೆ 6 ರಿಂದ ಬೆಳಗ್ಗೆ 6 ಗಂಟೆ ತನಕ ಮರಳು ಸಾಗಾಟ ಮಾಡುವ ಅನಿವಾರ್ಯತೆ ಏನಿದೆ.?. ಎಂದು ಗ್ರಾಮಸ್ಥರು ಪ್ರಶ್ನಿಸಿದ ಘಟನೆ ಡಿ 8ರಂದು ಶಾಸಕರ ನೇತೃತ್ವದಲ್ಲಿ ನಡೆದ ಇಂದಬೆಟ್ಟು ಗ್ರಾಮ ಮಟ್ಟದ ಜನಸ್ಪಂದನ ಸಭೆಯಲ್ಲಿ ನಡೆದಿದೆ.

ನೇತ್ರಾವತಿ ನದಿ ಸೇರಿದಂತೆ ಹಲವು ಕಡೆಗಳಲ್ಲಿ ಮರಳು ಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಅವರು ಸುಮ್ಮನಿರಲು ಕಾರಣಗಳೇನು, ಮರಳುಗಾರಿಕೆ ಅಕ್ರಮವೋ, ಸಕ್ರಮವೋ,ಸಾರ್ವಜನಿಕರು ಈ ಬಗ್ಗೆ ಪ್ರಶ್ನಿಸಿದರೆ ಅನುಮತಿ ಇದೆ ಎನ್ನುವ ಉತ್ತರ ಬರುತ್ತದೆ. ಇವತ್ತಿನ ಸಭೆಗೆ ಪೊಲೀಸ್ ಇಲಾಖೆಯಿಂದ ಗೈರಾಗಲು ಕಾರಣಗಳೇನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಉತ್ತರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸಿ ಪೊಲೀಸ್ ಇಲಾಖೆಗೆ ಜನಸ್ಪಂದನ ಸಭೆಯ ಮಾಹಿತಿ ನೀಡಿಲ್ಲವೇ , ಅವರು ಸಭೆಗೆ ಬಾರದಿರಲು ಕಾರಣ ಕೇಳಿ ಇನ್ಸ್ ಪೆಕ್ಟರ್ ಅವರಿಗೆ ನೋಟೀಸ್ ನೀಡುವಂತೆ ಶಾಸಕರು ಸೂಚಿಸಿದರು.

error: Content is protected !!