
ಬೆಳ್ತಂಗಡಿ: ಬೆಳ್ತಂಗಡಿ ಮೊಬೈಲ್ ಅಸೋಸಿಯೇಶನ್ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತಾಲೂಕಿನ ವಿವಿಧ ಮೊಬೈಲ್ ಅಂಗಡಿಗಳಲ್ಲಿ ಗ್ರಾಹಕರಿಗೆ ವಿತರಿಸಲಾದ ಲಕ್ಕಿ ಕೂಪನ್ ಗಳ ಡ್ರಾ ಕಾರ್ಯಕ್ರಮ ಡಿ.01 ಸೋಮವಾರ ಬಸ್ ನಿಲ್ದಾಣದ ಬಳಿ ನಡೆಯಿತು. ಉದ್ಘಾಟನೆಯನ್ನು ಡಿವೈಎಸ್ಪಿ ರೋಹಿಣಿ ಸಿ.ಕೆ. ನೆರವೇರಿಸಿ ಮೊಬೈಲ್ ಸೇರಿದಂತೆ ಅನ್ ಲೈನ್ ವಂಚನೆ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು, ಒಂದು ವೇಳೆ ಏನಾದರೂ ತೊಂದರೆಗೊಳಗಾದರೆ ತಡಮಾಡದೇ ತಕ್ಷಣ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿ ದೂರು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ,ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಮೊಬೈಲ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ಶೆಣೈ,ಕಲ್ಲಾರಿ ಕಮ್ಯೂನಿಕೇಶನ್ಸ್ ಮಾಲಕ ಜಗದೀಶ್ ಆಚಾರ್ಯ,ಸುದ್ದಿ ಬಿಡುಗಡೆ ವ್ಯವಸ್ಥಾಪಕ ಮಂಜುನಾಥ ರೈ,ಸುದ್ದಿ ಉದಯ ವಾರಪತ್ರಿಕೆಯ ಮುಖ್ಯಸ್ಥರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ,ಪತ್ರಕರ್ತ ಹೆರಾಲ್ಡ್ ಪಿಂಟೋ,ಬೆಳ್ತಂಗಡಿ ಮೊಬೈಲ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ ಸ್ವಾತಿ ಮೊಬೈಲ್, ಪ್ರಧಾನ ಕಾರ್ಯದರ್ಶಿ ಹರ್ಷದ್ ಇಮೇಜ್,ಜಿಲ್ಲಾ ಕಾರ್ಯದರ್ಶಿ ಅರಿಹಂತ್ ಜೈನ್, ಜಿಲ್ಲಾ ನಿರ್ದೆಶಕರಾದ ಉಮೇಶ್ ಬೆಳ್ತಂಗಡಿ ಹಾಗೂ ರಿಯಾಝ್ ಮಂಗಳೂರು ಸೇರಿದಂತೆ ತಾಲೂಕಿನ ವಿವಿಧ ಮೊಬೈಲ್ ಅಂಗಡಿಗಳ ಮಾಲಕರು ಉಪಸ್ಥಿತರಿದ್ದರು.ಪ್ರೇಮ್ ರಾಜ್ ಸಿಕ್ವೇರ ಕಾರ್ಯಕ್ರಮ ನಿರ್ವಹಿಸಿದರು. ಬಂಪರ್ ಬಹುಮಾನ ಬೈಕ್ , ನಾಲ್ಕು ಎಲ್ ಇ.ಡಿ ಟಿವಿ, ಸೇರಿದಂತೆ 40 ಕ್ಕಿಂತಲೂ ಅಧಿಕ ಬಹುಮಾನಗಳ ಡ್ರಾ ಈ ವೇಳೆ ನಡೆಯಿತು.

ಡ್ರಾ ವಿಜೇತರ ವಿವರ