
ಬೆಳ್ತಂಗಡಿ:ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ‘ಡಿ’ ವಲಯ 15 ರ ಜೇಸಿ ಉತ್ಸವ 2025 ಕಾರ್ಯಕ್ರಮವು ಡಿಸೆಂಬರ್ 07 ರಂದು ಸಂತೆಕಟ್ಟೆ ಬಳಿಯ ಸಮಾಜ ಮಂದಿರ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಎಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ಹೇಳಿದರು. ಅವರು ನ 26 ರಂದು ಜೆಸಿಐ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು.ನವೆಂಬರ್ 30 ರಂದು ತಾಲ್ಲೂಕು ಮಟ್ಟದ ಹೊರಾಂಗಣ ಕ್ರೀಡಾಕೂಟ ಕ್ರೀಡಾ ಆರಾಧನೆ ಲಾಯಿಲ ಗ್ರಾಮದ ಕರ್ನೊಡಿ ಶಾಲಾ ವಠಾರದಲ್ಲಿ ಬೆಳಿಗ್ಗೆ 9 ರಿಂದ ನಡೆಯಲಿದ್ದು, ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಪುರುಷರ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.ಡಿಸೆಂಬರ್ 07 ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಂತೆಕಟ್ಟೆ ಮಂಜುನಾಥ ಕಲಾಭವನದ ಬಳಿ ಇರುವ ಸಮಾಜ ಮಂದಿರ ರಂಗ ಮಂದಿರದಲ್ಲಿ ಸಾಂಸ್ಕೃತಿಕ ಆರಾಧನೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಬೆಳಿಗ್ಗೆ 10 ರಿಂದ ಯಕ್ಷ ಹಾಸ್ಯ ವೈಭವ ,ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಸಂಜೆ 5 ರಿಂದ ರಾಜ್ಯ ಮಟ್ಟದ ಫಿಲಂ ಡ್ಯಾನ್ಸ್ ಸ್ಪರ್ಧೆ, ಸಾಧನಾಶ್ರೀ ಪ್ರಶಸ್ತಿ ಪುರಸ್ಕಾರ, ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ, ಯುವ ಪ್ರೇರಣಾ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಜಿಲ್ಲಾ ಮಟ್ಟದ ಜೇಸಿ ಸ್ಟಾರ್ ಸಿಂಗರ್ ಸ್ಪರ್ಧೆ, ಬೆಳಿಗ್ಗೆ ಜೇಸಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆ, ತಾಲೂಕು ಮಟ್ಟದ ಮುಕ್ತಚೆಸ್ ಸ್ಪರ್ಧೆ ನಡೆಯಲಿದೆ. ಜೇಸಿ ಸಾಂಸ್ಕೃತಿಕ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಬೆಳಿಗ್ಗೆ 9 ರಿಂದ ಸ್ಟ್ರೀಟ್ ಫುಡ್, ಆಹಾರ ಮೇಳ ಹಾಗೂ ವ್ಯಾಪಾರ ಮಳಿಗೆ ಮತ್ತು ಪ್ರದರ್ಶನ ಮಳಿಗೆ, ಸ್ಥಳದಲ್ಲೇ ಭಾವ ಚಿತ್ರ ಅಥವಾ ವ್ಯಂಗ್ಯ ಚಿತ್ರ ರಚನೆ, 1ರಿಂದ 5 6 ರಿಂದ 10 ನೇ ತರಗತಿ, ಸಾರ್ವಜನಿಕರಿಗೆ ತಾಲೂಕು ಮಟ್ಟದ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಿದಾನಂದ ಇಡ್ಯಾ, ಪ್ರಶಾಂತ್ ಲಾಯಿಲ, ಸಂತೋಷ್ ಕೊಟ್ಯಾನ್, ನಾರಾಯಣ ಶೆಟ್ಟಿ, ರಜತ್ ಮೊರ್ತಾಜೆ,ರಕ್ಷಿತ್ ಅಂಡಿಂಜೆ, ಪ್ರಮೋದ್ ಕೆ, ಭವ್ಯ,ಉಪಸ್ಥಿತರಿದ್ದರು.