ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ:ನೂತನ ರಾಜಗೋಪುರ,ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ:

 

 

 

ಬೆಳ್ತಂಗಡಿ: ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ ಉರುವಾಲು ಗ್ರಾಮ ಇಲ್ಲಿ ನಿರ್ಮಿಸಿರುವ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನದ ಲೋಕಾರ್ಪಣೆ ಅಥರ್ವಶೀರ್ಷ ಗಣಯಾಗ ಹಾಗೂ ಮಹಾ ಚಂಡಿಕಾ ಯಾಗ ಡಿಸೆಂಬರ್ 6 ರಿಂದ 8 ರವರೆಗೆ ವಿವಿಧ ಧಾರ್ಮಿಕ ವಿದಿವಿಧಾನ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಉದ್ಯಮಿಗಳು ರಾಜಗೋಪುರ ಲೋಕಾರ್ಪಣಾ ‌‌ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ನ 18ರಂದು  ಬಿಡುಗಡೆಗೊಳಿಸಿದರು. ಈ ವೇಳೆ ಸಮಿತಿಯ ಗೌರವಾಧ್ಯಕ್ಷ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ,ಯೋಗೀಶ್ ಕಡ್ತಿಲ,ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

 

 

 

 

ಡಿಸೆಂಬರ್ 06 ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಡಿ07 ಮಧ್ಯಾಹ್ನ ಯಾಗ ಮಂಟಪದಲ್ಲಿ ಅಥರ್ವಶೀರ್ಷ ಗಣಯಾಗ ನಡೆಯಲಿದೆ. ಸಂಜೆ 6 ಗಂಟೆಗೆ ನೂತನ ರಾಜಗೋಪುರವನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶ್ರೀ ದುರ್ಗಾ ಗಣಪತಿ ಸಭಾಭವನವನ್ನು ಸದಾಶಿವ ಶೆಟ್ಟಿ ಕನ್ಯಾನ ಲೋಕಾರ್ಪಣೆ ಗೊಳಿಸಲಿದ್ದಾರೆ.ನಂತರ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣಾ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡಾ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಡಿ.08 ರಂದು ಮಹಾಚಂಡಿಕಾ ಯಾಗ ಸಂಜೆ 6.30 ರಿಂದ ದಿವಂಗತ ಶ್ರೀಮತಿ ಶ್ರೀದೇವಿ ಪುಷ್ಪಗಿರಿ ಇವರ ಸ್ಮರಣಾರ್ಥ ,ಧಾರ್ಮಿಕ ಮುಖಂಡ  ಕಿರಣ್ ಚಂದ್ರ ಪುಷ್ಪಗಿರಿ ಪ್ರಾಯೋಜಕತ್ವದಲ್ಲಿ  ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ನಡೆಯಲಿದೆ.

error: Content is protected !!