ಬೆಳ್ತಂಗಡಿ: ಗುರುವಾಯನಕೆರೆ ನವಶಕ್ತಿ ಮನೆಯ ಮಾತೃಶ್ರೀ ಕಾಶಿ ಶೆಟ್ಟಿಯವರು ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದು, ಅವರ
ಅಂತ್ಯ ಕ್ರಿಯೆಯು ನವಶಕ್ತಿ ಮನೆಯ ಬಳಿ ಸಂಜೆ ನಡೆಯಿತು. ಬೆಳಗ್ಗಿನಿಂದ ಸಂಜೆಯವರೆಗೆ ನವಶಕ್ತಿ ಮನೆಯಲ್ಲಿ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಮೋಹನ್ ಆಳ್ವ ಶಾಸಕರುಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ ಪಾಲ್ ಸುವರ್ಣ,ಸುನಿಲ್ ಕುಮಾರ್, ಉಮಾನಾಥ್ ಕೊಟ್ಯಾನ್,ವಿ.ಪ.ಸದಸ್ಯರುಗಳದ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರತಾಪ್ ಸಿಂಹ ನಾಯಕ್ , ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸೇರಿದಂತೆ ಗಣ್ಯರು,ಹಾಗೂ ಸಹಸ್ರಾರು ಮಂದಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಂತೈಸಿ ಸಂತಾಪ ಸೂಚಿಸಿದರು.
ಸಹಸ್ರಾರು ಮಂದಿಗೆ ಅನ್ನ ನೀಡಿದ ಮಹಾತಾಯಿ ನಮ್ಮನ್ನೆಲ್ಲ ಅಗಲಿದ್ದಾರೆ. ಕೊಡುಗೈದಾನಿ ಶಶಿಧರ್ ಶೆಟ್ಟಿ, ರಾಜೇಶ್ ಶೆಟ್ಟಿ ಸೇರಿದಂತೆ ತನ್ನ ಆರು ಮಂದಿ ಮಕ್ಕಳನ್ನು ಶಿಸ್ತು, ಸಂಸ್ಕಾರಯುತವಾಗಿ ಬೆಳೆಸಿದ್ದರಿಂದ ಇವತ್ತು ಸಮಾಜದಲ್ಲಿ ಅವರು ಸಮಾಜಮುಖಿ ಚಿಂತನೆಗಳೊಂದಿಗೆ ಶ್ರೇಷ್ಠ ವ್ಯಕ್ತಿಗಳಾಗಿ ಎಲ್ಕರೂ ಗೌರವಿಸುವ ರೀತಿಯಲ್ಲಿ ಬಾಳುತಿದ್ದಾರೆ. ಮನೆಗೆ ಬರುತಿದ್ದ ಎಲ್ಲರನ್ನೂ ಆತ್ಮೀಯವಾಗಿ ಪ್ರೀತಿಯಿಂದ ಬರಮಾಡಿಕೊಳ್ಳುತಿದ್ದ ಅವರ ಸರಳ ಜೀವನ ಇತರರಿಗೆ ಮಾದರಿ,ನನಗೂ ನವಶಕ್ತಿ ಮನೆಗೂ ಅವಿನಾಭಾವ ಸಂಬಂಧ ನನ್ನನ್ನೂ ಮಗನಂತೆ ನೋಡುತಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನುಡಿಯುತ್ತ ಭಾವುಕರಾದರು.