ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ , ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು ನವಶಕ್ತಿ ಗುರುವಾಯನಕೆರೆ, ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಬಂಟರ ಸಂಘ ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಸೆ 14 ಭಾನುವಾರ ಬೆಳಿಗ್ಗೆ 10.30 ರಿಂದ ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಸಂಘದ ಗೌರವ ಮಾರ್ಗದರ್ಶಕರು ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ನೆರವೇರಿಸಲಿದ್ದಾರೆ.
ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅನೂಪ್ ಎ ಶೆಟ್ಟಿ ಐಪಿಎಸ್, ಡಿಸಿಪಿ ಬೆಂಗಳೂರು ನಗರ, ಅಜಿತ್ ಎಂ. ಕೆಎಎಸ್, ಸ್ಪೆಷಲ್ ಲ್ಯಾಂಡ್ ಎಕ್ಸೇಷನ್ ಆಫೀಸರ್ ,ಎಆರ್ ಐ ಡಿಇ, ಬೆಂಗಳೂರು, ಹಸ್ತಾ ಶೆಟ್ಟಿ ಎಸಿಎಫ್ (ಪ್ರೊಬೇಶನ್) ಮಂಗಳೂರು ವಲಯ, ವಿಜಯ ಜೆ. ಶೆಟ್ಟಿ ಹಾಲಾಡಿ ಗೌರವ ಕಾರ್ಯದರ್ಶಿ ಬಂಟರ ಸಂಘ ಬೆಂಗಳೂರು, ಜಯರಾಜ್. ಬಿ. ರೈ ಅಧ್ಯಕ್ಷರು ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಂಗಳೂರು, ಜಯಂತ ಶೆಟ್ಟಿ ಕುಂಟಿನಿ ಉಪಾಧ್ಯಕ್ಷರು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಜಯರಾಮ ಭಂಡಾರಿ ಮಾತೃ ಸಂಘ ತಾಲೂಕು ಸಂಚಾಲಕರು,ಜಯರಾಮ ಶೆಟ್ಟಿ ಮುಂಡಾಡಿಗುತ್ತು, ನಿರ್ದೇಶಕರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಭಾಗವಹಿಸಲಿದ್ದಾರೆ.