ಬೆಳ್ತಂಗಡಿ : ಬುರುಡೆ ಪ್ರಕರಣ ಸಂಬಂಧ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ಗಿರೀಶ್ ಮಟ್ಟಣ್ಣವರ್ ಗೆ ನೀಡಿದ್ದು ಪಾಂಗಳದ ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ.
ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆಯನ್ನು ತಂದು ಗಿರೀಶ್ ಮಟ್ಟಣ್ಣವರ್ ಗೆ ನೀಡಿದ್ದು ಅದನ್ನು ಜಯಂತ್. ಟಿ ಮೂಲಕ ಆರೋಪಿ ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ.
ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳು ಸೆ.6 ರಂದು ಸಂಜೆ ಬುರುಡೆ ತೆಗೆದುಕೊಂಡು ಬಂದ ಸೌಜನ್ಯ ಮಾವ ವಿಠಲ್ ಗೌಡನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.