ಬೆಳ್ತಂಗಡಿ : ಅನನ್ಯ ಭಟ್ ನಾಪತ್ತೆ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ಆ.29 ರಂದು ನಾಲ್ಕನೇ ದಿನ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆ.
ಈ ವಿಚಾರಣೆಯಲ್ಲಿ ಆರೋಪ ಮಾಡಿದ ಎಲ್ಲವೂ ಸುಳ್ಳು ಎಂದು ಒಪ್ಪಿಕೊಂಡಿದ್ದು ಇದಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು,
ಸುಜಾತ ಭಟ್ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪಿಟಿಷನ್ ಮಾತ್ರ ಅಗಿರುವುದು ಮತ್ತು ವೃದ್ಧೆಯಾಗಿರುವ ಕಾರಣ ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಪ್ರಕರಣವನ್ನು ತನಿಖೆ ಮಾಡಲಿರುವ ಎಸ್.ಐ.ಟಿ ಅಧಿಕಾರಿಗಳು.
ಸುಜಾತ ಭಟ್ ಎಸ್.ಐ.ಟಿ ಅಧಿಕಾರಿಗಳು ಕರೆದಾಗ ಬರುವಂತೆ ಸೂಚನೆ ನೀಡಿ ವಾಪಸ್ ಬೆಂಗಳೂರು ಮನೆಗೆ ಕಳುಹಿಸಿದ್ದಾರೆ.