ಬೆಳ್ತಂಗಡಿ:ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾ ಸಮಗ್ರ ಚಾಂಪಿಯನ್‌ಶಿಪ್
24-25 ನೇ ವರ್ಷದ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಮಡಂತ್ಯಾರ್ ಸೇಕ್ರೆಡ್ ಹಾರ್ಟ್
ಕಾಲೇಜು ಸಮಗ್ರ ಚಾಂಪಿಯನ್‌ಶಿಪ್‌ನಲ್ಲಿ 252 ಅಂಕಗಳೊಂದಿಗೆ ಮೂರನೇ ಸ್ಥಾನ ಪುರುಷರ
ವಿಭಾಗದಲ್ಲಿ 153 ಅಂಕಗಳೊಂದಿಗೆ ಮೂರನೇ ಸ್ಥಾನ
ಮಹಿಳಾ ವಿಭಾಗದಲ್ಲಿ 99 ಅಂಕಗಳೊಂದಿಗೆ ಆರನೇ ಸ್ಥಾನವನ್ನು ಪಡೆದ
ಸಾಧನೆ ಮಾಡಿದೆ.
ಕಳೆದ ವರ್ಷ ಸೇಕ್ರೆಡ್ ಹಾರ್ಟ್ ಕಾಲೇಜಿನ
ಪುರುಷರ ತಂಡ ಮಂಗಳೂರು ವಿ.ವಿ.ಅಂತರ್ ಕಾಲೇಜು ಪಂದ್ಯಾಟಗಳಲ್ಲಿ
19 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರೆ ಮಹಿಳಾ ತಂಡಗಳು 13 ವಿವಿಧ
ಕ್ರೀಡೆಗಳಲ್ಲಿ ಭಾಗವಹಿಸಿದ್ದವು.
ತಂಡಗಳ ಸಾಧನೆ:-
ಪುರುಷರ ವಿಭಾಗ: ಕ್ರಿಕೆಟ್ (ಮಂಗಳೂರು ವಲಯ ಚಾಂಪಿಯನ್ಸ್, ಅಂತರ್
ವಲಯ ಚಾಂಪಿಯನ್ಸ್) ಟೆನಿಸ್ (ದ್ವಿತೀಯ ಸ್ಥಾನ) ಈಜು (ಒಟ್ಟು 8 ಪದಕಗಳು
ಮತ್ತು ತಂಡ ಪ್ರಶಸ್ತಿ ಮೂರನೇ ಸ್ಥಾನ) ಕುಸ್ತಿ (ಒಟ್ಟು 4 ಪದಕಗಳು
ಮತ್ತು ತಂಡ ಪ್ರಶಸ್ತಿ ಮೂರನೇ ಸ್ಥಾನ) ದೇಹಧಾಡ್ಯ ಸ್ಪರ್ಧೆ (ಒಟ್ಟು 3
ಪದಕಗಳು ಮತ್ತು ತಂಡ ಪ್ರಶಸ್ತಿ ಮೂರನೇ ಸ್ಥಾನ) ಬಾಲ್ ಬ್ಯಾಡ್ಮಿಂಟನ್
(ಮೂರನೇ ಸ್ಥಾನ) ಬ್ಯಾಡ್ಮಿಂಟನ್ (ಐದನೇ ಸ್ಥಾನ) ಪವರ್ ಲಿಪ್ಟಿಂಗ್ (1 ಪದಕ ತಂಡ
ಪ್ರಶಸ್ತಿ ಏಳನೇ ಸ್ಥಾನ) ಕ್ರಾಸ್ ಕಂಟ್ರಿ (ಏಳನೇ ಸ್ಥಾನ) ಹ್ಯಾಂಡ್ ಬಾಲ್ (ಏಳನೇ
ಸ್ಥಾನ)
ಮಹಿಳಾ ವಿಭಾಗ:
ಫುಟ್ ಬಾಲ್ (ಎರಡನೇ ಸ್ಥಾನ) ಚೆಸ್ (ಮೂರನೇ ಸ್ಥಾನ) ತ್ರೋಬಾಲ್ (ನಾಲ್ಕನೇ
ಸ್ಥಾನ) ಟೆನ್ನಿಸ್ (ಐದನೇ ಸ್ಥಾನ) ಹ್ಯಾಂಡ್ ಬಾಲ್ (ಆರನೇ ಸ್ಥಾನ) ಕ್ರಾಸ್ ಕಂಟ್ರಿ
(ಆರನೇ ಸ್ಥಾನ) ಬ್ಯಾಡ್ಮಿಂಟನ್ (ಏಳನೇ ಸ್ಥಾನ) ಕುಸ್ತಿ(1 ಪದಕ ಹಾಗೂ ತಂಡ
ಪ್ರಶಸ್ತಿ ಎಂಟನೇ ಸ್ಥಾನ)
ಅದೇ ರೀತಿ ಕಳೆದ ಸಾಲಿನಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜಿನ 13 ವಿದ್ಯಾರ್ಥಿಗಳು
ಅಂತರ್ ವಿಶ್ವವಿದ್ಯಾನಿಲಯ ಮಟ್ಟ ಕ್ರೀಡಾಸ್ಪರ್ಧೆಗಳಲ್ಲಿ
ಭಾಗವಹಿಸಿದ್ದರು ಹಾಗೂ ನಾಲ್ಕು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ
ಭಾಗವಹಿಸಿದ್ದರೆ, ಒಟ್ಟು 6 ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ
ಆಹ್ವಾನಿತ ತ್ರೋಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಭಾರತದ ಪುರುಷರ ಹಾಗೂ ಮಹಿಳಾ ತಂಡಗಳೆರಡೂ ವಿಜಯಿ
ಶಾಲಿಯಾಗಿದ್ದರು.
ಸೇಕ್ರೆಡ್ ಹಾರ್ಟ್ ಕಾಲೇಜಿನ ಕ್ರೀಡಾ ಪಟುಗಳ ಈ ವಿಶೇಷ ಸಾಧನೆಗೆ
ಸೇಕ್ರೆಡ್ ಹಾರ್ಟ್ ಸಮೂಹ ಸಂಸ್ಥೆಗಳ ಸಂಚಾಲಕರು, ಕಾಲೇಜಿನ
ಪ್ರಾಂಶುಪಾಲರು ಆಡಳಿತ ಮಂಡಳಿ, ಹಿರಿಯ ವಿದ್ಯಾರ್ಥಿ ಸಂಘ, ರಕ್ಷಕ-ಶಿಕ್ಷಕ
ಸಂಘ, ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತ ವೃಂದ ಮತ್ತು ವಿದ್ಯಾರ್ಥಿ
ವೃಂದವು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.