ಧರ್ಮಸ್ಥಳ, ಕುತೂಹಲ ಕೆರಳಿಸಿದ ಪಾಯಿಂಟ್ ನಂಬ್ರ 13: 15 ಅಡಿಗಿಂತಲೂ ಅಧಿಕ ಆಳ ಅಗೆದರೂ ಸಿಗಲಿಲ್ಲ ಕಳೇಬರ: ಶೋಧ ಕಾರ್ಯ ಸ್ಥಗಿತದ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ..!

 

 

 

 

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.12 ರಂದು ಪಾಯಿಂಟ್ ನಂಬರ್ 13 ರಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಯಾವುದೇ ಕಳೇಬರದ ಕುರುಹುಗಳು ಪತ್ತೆಯಾಗಿಲ್ಲ. ಕಳೆದ 12 ದಿನಗಳಿಂದ ಶೋಧ ಕಾರ್ಯ ಎಸ್ಐಟಿ ನೇತೃತ್ವದಲ್ಲಿ ನಡೆಯುತಿದ್ದು, ನೇತ್ರಾವತಿ ನದಿ ಬದಿಯಲ್ಲಿ ಗುರುತು ಮಾಡಿದ 13 ರ ಶೋಧ ಕಾರ್ಯ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಕಾರಣ ಅನಾಮಧೇಯ ಮುಸುಕುಧಾರಿ ದೂರುದಾರ ವ್ಯಕ್ತಿ ಈ ಸ್ಥಳದಲ್ಲಿ ಹಲವಾರೂ ಶವಗಳನ್ನು ಹೂತು ಹಾಕಲಾಗಿದೆ ಎಂಬ ಮಾಹಿತಿ ನೀಡಿದ್ದ ಈ ಹಿನ್ನೆಲೆಯಲ್ಲಿ ಈ ಜಾಗ ಅಧಿಕಾರಿಗಳು ಸೇರಿದಂತೆ ಎಲ್ಲರಲ್ಲೂ ಅತ್ಯಂತ ಕುತೂಹಲದಾಯಕ ಮಾರ್ಕ್ ಆಗಿತ್ತು. ಅದಲ್ಲದೇ ಈ ಜಾಗದ ಬದಿಯಲ್ಲೇ ನೇತ್ರಾವತಿ ನದಿಗೆ ಅಳವಡಿಸಲಾಗಿದ್ದ ಕಿಂಡಿ ಅಣೆಕಟ್ಟು ಹಾಗೂ ವಿದ್ಯುತ್ ಪರಿವರ್ತಕ ಇದ್ದುದರಿಂದ ಡ್ರೋನ್ ಜಿಪಿಆರ್ ಟೆಕ್ನಾಲಜಿ ಬಳಸಿ ಶೋಧ ನಡೆಸಿ ನಂತರ ಜೆಸಿಬಿ ಮೂಲಕ ಕಾರ್ಯಚರಣೆ ಮಾಡಲಾಯಿತು.ಮಧ್ಯಾಹ್ನ ಪ್ರಾರಂಭಗೊಂಡ ಕಾರ್ಯಚರಣೆ ಸಂಜೆ 6.30 ರವರೆಗೆ ಸುಮಾರು 15 ಅಡಿ ಆಳ ಅಗೆದರೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಕತ್ತಲು ಆವರಿಸಿದ್ದರಿಂದ ಕಾರ್ಯಚರಣೆ ನಾಳೆಯೂ ಮುಂದುವರಿಸುವ ಸಾಧ್ಯತೆ ಇದೆ.ಈಗಾಗಲೇ ರಾಜ್ಯಾದ್ಯಂತ ಕಾರ್ಯಚರಣೆಯ ಬಗ್ಗೆ ಹಾಗೂ ದೂರುದಾರನ ವಿರುದ್ಧ ಆಕ್ರೋಶ ಕಂಡು ಬರುತಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಸದನದ ಕಲಾಪದಲ್ಲೂ ಈ ಬಗ್ಗೆ ಚರ್ಚೆ‌ನಡೆಯುತಿದ್ದು, ಧಾರ್ಮಿಕ ಕ್ಷೇತ್ರಗಳನ್ನು ಅವಹೇಳನಾ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ಇದರ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಶಾಸಕಾಂಗ ಸಭೆಯಲ್ಲಿ 13 ನೇ ಸ್ಥಳದಲ್ಲೂ ಕುರುಹು ಪತ್ತೆಯಾಗದಿದ್ದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಸುಳಿವು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದಲ್ಲದೇ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಧರ್ಮಸ್ಥಳಕ್ಕೆ ಭೇಟಿ ನೀಡಿ ಪಂಚಾಯತ್ ನಿಂದ ಕೆಲವು ದಾಖಲೆಗಳ ಮಾಹಿತಿ ಪಡೆದುಕೊಂಡಿದೆ. ಪ್ರಕರಣವು ದಿನದಿಂದ ದಿನ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

error: Content is protected !!