ಅಗೆದರೂ ಬಗೆದರೂ ಸಿಗುತ್ತಿಲ್ಲ ತಲೆ “ಬುರುಡೆ”: ಬಾಹುಬಲಿ‌ ಬೆಟ್ಟದ ಬಳಿಯೂ‌ ಇಲ್ಲ ಕುರುಹು: ಮುಸುಕುಧಾರಿ ವ್ಯಕ್ತಿಯ ಮೇಲೆ ಮೂಡುತ್ತಿದೆ ಅನುಮಾನ ಹುತ್ತ..!:

 

 

ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದಲ್ಲಿ ಆ.9 ರಂದು ಧರ್ಮಸ್ಥಳದ ಬಾಹುಬಲಿ ಬೆಟ್ಟದ ಪಕ್ಕದಲ್ಲಿ 16 ಮತ್ತು 16-A ಗುರುತು ಮಾಡಿದ ಎರಡು ಜಾಗದಲ್ಲಿ 12:55 ಗಂಟೆಯಿಂದ 6:30 ರವರೆಗೆ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ.

ದೂರುದಾರ ತಿಳಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಜೆಸಿಬಿ ಬಳಸಿ 15 ಅಡಿ ಉದ್ದ ಮತ್ತು 8 ಅಡಿ ಅಳ ಅಗೆದರೂ ಯಾವುದೇ ಅಸ್ಥಿಪಂಜರದ ಕುರುಹು ಪತ್ತೆಯಾಗಿಲ್ಲ. ಮತ್ತೊಂದು ಜಾಗದಲ್ಲಿ ಕಾರ್ಮಿಕರು ಸೇರಿ ಅಗೆದರೂ ಕೂಡ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ ಎಂದು SIT ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

error: Content is protected !!