ಬೆಳ್ತಂಗಡಿ : ದೂರುದಾರನ ಜೊತೆ ಆಗಸ್ಟ್ 4 ರಂದು ನೇತ್ರಾವತಿ ಸ್ನಾನ ಘಟ್ಟದ ಬಳಿಯ ಅರಣ್ಯದಲ್ಲಿ ಗುರುತು ಮಾಡದ ಸ್ಥಳಕ್ಕೆ ಕರೆದುಕೊಂಡು ಹೋಗುವ ವೇಳೆ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಅರಣ್ಯ ಪ್ರದೇಶದ ಮೇಲ್ಬಾಗದಲ್ಲಿ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಒಂದು ಗಂಡಸಿನ ಅಸ್ಥಿಪಂಜರ ಬಿದ್ದಿರುವುದು ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ಹಗ್ಗ ಬಟ್ಟೆಗಳು ಪತ್ತೆಯಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಅದನ್ನು ಮಹಜರು ನಡೆಸಿ ಪ್ರಯೋಗಲಾಯಕ್ಕೆ ಎಸ್ ಐಟಿ ಅಧಿಕಾರಿಗಳು ಕಳುಹಿಸಿಕೊಡಲಿದ್ದಾರೆ.ನಂತರವೇ ಈ ಪ್ರಕರಣದ ಸ್ಪಷ್ಟ ಚಿತ್ರಣ ದೊರಕಲಿದೆ.
ಇಂದಿನ ಕಾರ್ಯಾಚರಣೆಯನ್ನು ಸಂಜೆ 6:30 ಕ್ಕೆ ಮುಕ್ತಾಯ ಮಾಡಿದ್ದಾರೆ.