ಮನೆಯೊಳಗೆ ಅಕ್ರಮವಾಗಿ ಗಾಂಜಾ ದಾಸ್ತಾನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

 

 

 

ಬೆಳ್ತಂಗಡಿ :  ಕಟ್ಟಡದೊಳಗೆ ಅಕ್ರಮ ದಾಸ್ತಾನು ಇರಿಸಿದ್ದ ಗಾಂಜಾವನ್ನು ಪುಂಜಾಲಕಟ್ಟೆ ಪೊಲೀಸರು ದಾಳಿ ಮಾಡಿ ಶೇಖರಿಸಿಟ್ಟ ಗಾಂಜಾವನ್ನು ಪತ್ತೆಹಚ್ಚಿದ್ದು .ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ‌. ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ಎಂಬಲ್ಲಿ ರಫೀಕ್ ಎಂಬಾತನ ಮನೆಯೊಳಗೆ 160 ಗ್ರಾಂ ಗಾಂಜಾ ಶೇಖರಿಸಿಟ್ಟ ಬಗ್ಗೆ ಪುಂಜಾಲಕಟ್ಟೆ ಪಿಎಸ್ಐ ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ8C,20B NDPS Act ಅಡಿಯಲ್ಲಿ ಆರೋಪಿ ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ರಫೀಕ್ ವಿರುದ್ಧ ಈ ಹಿಂದೆ ಹಲವು ಗಾಂಜಾ ಪ್ರಕರಣ ದಾಖಲಾಗಿದೆ.

ಆಗಸ್ಟ್ 03 ರಂದು ಸಂಜೆ  6.30 ರ ಸುಮಾರಿಗೆ  ಪುಂಜಾಲಕಟ್ಟೆ ಪಿಎಸ್ಐ ರಾಜೇಶ್.ಕೆ.ವಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ಎಂಬಲ್ಲಿ ನಿರ್ಮಾಣ ಹಂತದ ಛಾವಣಿ ಇಲ್ಲದ ಕಟ್ಟಡದೊಳಗೆ ರಫೀಕ್ ಎಂಬಾತನು ಅಕ್ರಮವಾಗಿ ಸುಮಾರು ರೂ.15,000 ಮೌಲ್ಯದ ಒಟ್ಟು 160 ಗ್ರಾಂ ತೂಕದ ಗಾಂಜಾದ ಎಲೆ ಮೊಗ್ಗು, ಬೀಜವನ್ನು ತಂದಿಟ್ಟಿದ್ದನ್ನು ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪಂಚರ ಸಮಕ್ಷಮ  ಮಹಜರು ನಡೆಸಿ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ   ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

error: Content is protected !!