ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧಿಸಿದಂತೆ ಜುಲೈ 30 ರಂದು 10 ಗಂಟೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ತನ್ನ ವಕೀಲರ ಜೊತೆ ಅನಾಮಧೇಯ ವ್ಯಕ್ತಿ ಆಗಮಿಸಿದ್ದು .ಎಸ್ಐಟಿ ಕಛೇರಿಯಿಂದ 3 ನೇ ದಿನದ ಕಾರ್ಯಚರಣೆಗಾಗಿ ಅಧಿಕಾರಿಗಳ ತಂಡ ನೇತ್ರಾವತಿ ಸ್ನಾನ ಘಟ್ಟದ ಬಳಿಯ ಅರಣ್ಯ ಪ್ರದೇಶತ್ತ ಹೊರಟಿದೆ. ಕೆಲವೇ ಕ್ಷಣಗಳಲ್ಲಿ ಗುರುತು ಮಾಡಿರುವ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಕಾರ್ಯಾಚರಣೆಯಲ್ಲಿ ಐಪಿಎಸ್ ಅನುಚೇತ್, ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್ , ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರು ಕೆ.ಎಮ್.ಸಿ ವೈದ್ಯರ ತಂಡ, ಎಫ್ಎಸ್ಎಲ್ ತಂಡ, ಐ.ಎಸ್.ಡಿ ಹಾಗೂ ಇತರ ಅಧಿಕಾರಿಗಳು ಭಾಗಿಯಾಗಲಿದ್ದಾರೆ.