ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಜುಲೈ 29 ರಂದು ಬೆಳಗ್ಗೆ 10 ಗಂಟೆಗೆ ದೂರುದಾರ ತನ್ನ ವಕೀಲರ ಜೊತೆ ಕಾರಿನಲ್ಲಿ ಆಗಮಿಸಿ ತನಿಖೆಗೆ ಹಾಜರಾಗಿದ್ದಾನೆ.
ಐಪಿಎಸ್ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ , ವೈದ್ಯರ ತಂಡ, ಎಫ್.ಎಸ್.ಎಲ್ ವಿಭಾಗದ ಸೋಕೋ ತಂಡ, ಐ.ಎಸ್.ಡಿ, ಸಿಸಿಟಿ ತಂಡ,ಅರಣ್ಯ ಇಲಾಖೆ ತಂಡ ಆಗಮಿಸಿದ್ದಾರೆ.