ಸರಕಾರಿ ಸಮುದಾಯ ಆಸ್ಪತ್ರೆ ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಭೆ:

 

 

ಬೆಳ್ತಂಗಡಿ : ಸರಕಾರಿ ಸಮುದಾಯ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯು ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆಸ್ಪತ್ರೆಯ ಅಭಿವೃದ್ದಿಯ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಯ ಮೂಲಭೂತ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ಪಡೆಯಲು ಅಂದಾಜು ಪಟ್ಟಿ ತಯಾರಿಸುವಂತೆ ಸಭೆಯಲ್ಲಿ ತಿಳಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬರೆದು ಮಾಹಿತಿ ನೀಡುವಂತೆ ತಿಳಿಸಲಾಯಿತು.ಕೊರತೆ ಇರುವ ಔಷಧವನ್ನು ಇಲಾಖೆಯಿಂದ ತಕ್ಷಣ ತರಿಸುವಂತೆ ಹೇಳಿದರು. ಆಸ್ಪತ್ರೆಯ ಆವರಣದ ಒಳಗೆ ಖಾಸಗಿ ವಾಹನವನ್ನು ನಿಲ್ಲಿಸುವುದರಿಂದ ತೊಂದರೆ ಆಗುತ್ತಿದೆ ಕೂಡಲೇ ಕ್ರಮ ವಹಿಸುವಂತೆ ತಿಳಿಸಿದರು.

 

 

ಒಳರೋಗಿ ಮತ್ತು ಹೊರರೋಗಿಗಳಿಗೆ ಪ್ರತ್ಯೇಕ ಕೌಂಟರ್ ಮಾಡುವಂತೆ ಸಭೆಯಲ್ಲಿ ಸದಸ್ಯರು ತಿಳಿಸಿದರು.ಆಸ್ಪತ್ರೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕೆಂದು ತಿಳಿಸಿದರು.
ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್,ನಗರ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಆರೋಗ್ಯಾಧಿಕಾರಿ ಡಾ.ಸಂಜಾತ್,ವೈದ್ಯಾಧಿಕಾರಿ ಡಾ.ರಮೇಶ್ ,ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಂಕಪ್ಪ,ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕ್ಲೈಮೆಂಟ್ ಬೆಂಜಮಿನ್ ಬ್ರಾಗ್ಸ್,ಡಾ.ಶಶಿಕಾಂತ್ ಡೋಂಗ್ರೆ,ಡಾ.ಶಶಾಂಕ್,
ಡಾ.ತಾರಕೇಶ್ವರಿ, ಡಾ.ಆಶಾಲತಾ,
ಡಾ.ಹೇಮಲತಾ,ಡಾ.ರಶ್ಮಿ ,
ರಕ್ಷಾ ಸಮಿತಿ ಸದಸ್ಯರಾದ ನವೀನ್ ಗೌಡ ಸವಣಾಲು, ಸೆಬಾಸ್ಟಿಯನ್ ಪಿ.ಟಿ., ವೆಂಕಣ್ಣ ಕೊಯ್ಯೂರು, ವೀರೆಂದ್ರ ಕುಮಾರ್ ಜೈನ್, ಅಬ್ದುಲ್ ರಶೀದ್ ಕಕ್ಕಿಂಜೆ, ಸ್ಟೀವನ್ ಮೋನಿಸ್, ಶ್ರೀಮತಿ ಸವಿತಾ ಸುಲ್ಕೇರಿ, ಆರೋಗ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಅಜಯ್ ಕಲ್ಲೇಗ ಉಪಸ್ಥಿತರಿದ್ದರು.

error: Content is protected !!