ಹೃದಯಾಘಾತ, ತಾಲೂಕು ಕಚೇರಿಯ ಪ್ರಥಮದರ್ಜೆ ಸಹಾಯಕ ಕುಸಿದು ಬಿದ್ದು ಸಾವು:

 

 

ಬೆಳ್ತಂಗಡಿ : ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಮೂಲತಃ ಹಾಸನ ಜಿಲ್ಲೆಯ ಸತೀಶ್(46) ಜುಲೈ 15 ರಂದು ಬೆಳಿಗ್ಗೆ ಸ್ನಾನ ಮುಗಿಸಿ ಬರುವ ವೇಳೆ ಮನೆಯಲ್ಲಿ ಕುಸಿದು ಬಿದ್ದಿದ್ದು ತಕ್ಷಣ ಪತ್ನಿ ಸ್ಥಳೀಯ ಆಸ್ಪತ್ರೆಗೆ ಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿರುವ ಬಗ್ಗೆ ಧೃಡ ಪಡಿಸಿದ್ದಾರೆ.

ಸತೀಶ್ ಮೂಲತಃ ಹಾಸನ ಜಿಲ್ಲೆಯವರು ಲಾಯಿಲದಲ್ಲಿ ಬಾಡಿಗೆ ಮನೆ ಮಾಡಿದ್ದರು. ಪತ್ನಿ ಓರ್ವ ಮಗನನ್ನು ಅಗಲಿದ್ದಾರೆ.

error: Content is protected !!