ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣ, ತನಿಖೆಗೆ ಎಸ್ಐಟಿ ತಂಡ ರಚಿಸುವಂತೆ ಸಿ.ಎಂ ಗೆ ಮನವಿ: 7 ದಿನದೊಳಗೆ ಸಮಗ್ರ ಮಾಹಿತಿ ನೀಡುವಂತೆ ದ.ಕ.ಜಿಲ್ಲಾ ಎಸ್. ಪಿ. ಗೆ ಸೂಚನೆ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ:

 

 

 

ಬೆಳ್ತಂಗಡಿ : ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ ಬೆನ್ನಲ್ಲೇ ಮಾಧ್ಯಮಗಳ ವರದಿಯನ್ನು ನೋಡಿ ಪ್ರಕರಣ ಗಂಭೀರತೆ ಅರಿತು ತನಿಖೆ ನಡೆಸಲು ವಿಶೇಷ ತಂಡ(SIT) ರಚಿಸುವಂತೆ ಕೋರಿ ಜುಲೈ14 ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದಾರೆ.

ಮತ್ತೊಂದು ಪತ್ರವನ್ನು ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕರಿಗೆ ಬರೆಯಲಾಗಿದ್ದು ಅದರಲ್ಲಿ 20 ವರ್ಷಗಳಲ್ಲಿ ಎಷ್ಟು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಎಷ್ಟು ಜನರ ಪತ್ತೆ ಮಾಡಲಾಗಿದೆ.ಪತ್ತೆ ಮಾಡಲಾಗದ ಪ್ರಕರಣಗಳು ಎಷ್ಟು? ಅಸ್ವಾಭಾವಿಕವಾಸ ಸಾವು/ಕೊಲೆ ಪ್ರಕರಣಗಳಲ್ಲಿ ಕೈಗೊಂಡ ಕ್ರಮ ಮತ್ತು ಅತ್ಯಾಚಾರ ಪ್ರಕರಣಗಳ ವಿವರವನ್ನು ಈ ಪತ್ರ ತಲುಪಿದ 7 ದಿನದೊಳಗೆ ಆಯೋಗಕ್ಕೆ ವರದಿಯನ್ನು ಕಳುಹಿಸುವಂತೆ ಜುಲೈ 14 ರಂದು ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿದೆ.

error: Content is protected !!