ಬೆಳ್ತಂಗಡಿ; ಕಳಿಯದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಳಿಯ ಗ್ರಾಮದ ಗೇರುಕಟ್ಟೆ ಹಾಲಿನ ಸೊಸೈಟಿಯ ಸಮೀಪ ಜು 13ರಂದು ಬೆಳಗ್ಗೆ ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವಾಹನ ಪರಿಶೀಲನೆ ನಡೆಸುತಿದ್ದಾಗ ಮರಳು ತುಂಬಿದ ಲಾರಿ ಹಾಗೂ ಪಿಕಪ್ ವಾಹನ ಬಂದಿದ್ದು ಪೊಲೀಸರನ್ನು ನೋಡಿ ಪಿಕಪ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಚಾಲಕ ಮಹಮ್ಮದ್ ನೌಫಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರಳನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದು ಕಂಡು ಬಂದಿದೆ. ವಾಹನದಲ್ಲಿದ್ದ ಮರಳನ್ನು ಪೊಲೀಸರು ವಶಕ್ಕೆ ಪಡೆದು
ಈ ಎರಡು ವಾಹನಗಳ ಚಾಲಕರ ಹಾಗೂ ಮಾಲಕರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ
ಠಾಣೆ ಅ ಕ್ರ ನಂ : 60/2025 ಕಲಂ: ಕಲಂ: 42,43,44,ಕರ್ನಾಟಕ ಮೈನರ್ ಮಿನರಲ್ ಕನ್ಸಿಸ್ಟೆಂಟ್ ರೂಲ್ 1994,ಮತ್ತು ಕಲಂ:4(1),4(1ಎ),21(1),(1ಎ) ಎಮ್, ಎಮ್, ಆರ್, ಡಿ, 1957. ಮತ್ತು ಕಲಂ:303(2),ಬಿಎನ್ ಎಸ್ 2023ಯಂತೆ ಪ್ರಕರಣ ದಾಖಲಿಸಲಾಗಿದೆ