ಬೆಳ್ತಂಗಡಿ: ಉಜಿರೆ ಧರ್ಮಸ್ಥಳ ಹೆದ್ದಾರಿಯ ಕನ್ಯಾಡಿ ಬಳಿ ಬಸ್ ಕಾರು ನಡುವೆ ಅಪಘಾತ ನಡೆದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಕನ್ಯಾಡಿ ಶಾಲಾ ಬಳಿ ಬಸ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಪುಡಿ ಪುಡಿಯಾಗಿ ಉರಳಿ ಬಿದ್ದಿದೆ. ನೂರಾರು ಸಾರ್ವಜನಿಕರು ಓಡಾಡುವ ಜಾಗ ಇದಾಗಿದೆಯಲ್ಲದೇ ಪಕ್ಕದಲ್ಲೇ ಹೋಟೆಲು ಕೂಡ ಇದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.