ಉಜಿರೆ, ಕೆಟ್ಟು ನಿಂತ ಬಸ್, ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್: ತಡ ರಾತ್ರಿಯೂ ಪ್ರಯಾಣಿಕರಿಗೆ ಕಿರಿಕಿರಿ:

 

 

ಬೆಳ್ತಂಗಡಿ:, ಖಾಸಗಿ ಬಸ್ಸೊಂದು ರಸ್ತೆ ಮಧ್ಯೆ ಕೆಟ್ಟು ನಿಂತ ಪರಿಣಾಮ ತಡ ರಾತ್ರಿ ಟ್ರಾಫಿಕ್ ಜಾಮ್ ಆದ ಘಟನೆ ಉಜಿರೆಯಲ್ಲಿ ನಡೆದಿದೆ. ಖಾಸಗಿ ಬಸ್ಸೊಂದು ಎರ್ನೊಡಿ ಸೇತುವೆ ಬಳಿ ಕೆಟ್ಟು ನಿಂತ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.‌ಒಂದು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆ ಅಗೆದು ಹಾಕಿದ್ದು, ಅದಲ್ಲದೇ ಬೆಂಗಳೂರು ತೆರಳುವ ಬಸ್ ಗಳ ಸಂಚಾರ ಅಧಿಕವಾಗಿರುವ ಈ ಸಮಯದಲ್ಲಿ ಬಸ್ ಕೆಟ್ಟು ನಿಂತ ಪರಿಣಾಮ ವಾಹನ ಸವಾರರು ಕೆಲ ಹೊತ್ತು ತೊಂದರೆಗೊಳಗಾಗಿದ್ದಾರೆ.

error: Content is protected !!