ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ನಿವಾಸಿ ಹತ್ತನೇ ತರಗತಿಯ ವಿಧ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ಬಾಲಕ ಸ್ಥಳೀಯ ನಿವಾಸಿ ಗೋವಿಂದ ಗೌಡರ ಪುತ್ರ ಪ್ರಥಮ್ (16ವ) ಎಂಬಾತನಾಗಿದ್ದಾನೆ.
ಮೇ 4 ಭಾನುವಾರ ಮಧ್ಯಾಹ್ನದ ವೇಳೆ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಬಾಲಕನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.