ಬೆಳ್ತಂಗಡಿ: ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ತಾಲೂಕಿನ ಹಲವೆಡೇ ವಿಪರೀತ ಹಾನಿ ಬುಧವಾರ ಸಂಭವಿಸಿದೆ. ಲಾಯಿಲ ಗ್ರಾಮದ ಮೂರನೇ ವಾರ್ಡಿನ ಸಂಗಾತಿ ನಗರ ಎಂಬಲ್ಲಿ ದೊಡ್ಡ ಮರವೊಂದು ರಸ್ತೆಗೆ ಉರುಳಿಬಿದ್ದು ಸಾರ್ವಜನಿಕರಿಗೆ ತೊಂದರೆಯಾಗಿತ್ತಲ್ಲದೇ ವಿದ್ಯುತ್ ಕಂಬಗಳಿಗೂ ಹಾನಿ ಉಂಟಾಗಿತ್ತು. ಈ ಬಗ್ಗೆ ಕಾರ್ಯಪೃವೃತ್ತರಾದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್, ಆರ್, ಅರವಿಂದ ಕುಮಾರ್, ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಸ್ಥಳೀಯರ ಹಾಗೂ ಪಂಚಾಯತ್ ಸಹಕಾರದಲ್ಲಿ ರಸ್ತೆಗೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಲಾಯಿಲ ಗ್ರಾಮದ ಹಲವು ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು , ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ವ್ಯತ್ಯಾಯ ಉಂಟಾಗಿದೆ. ಈಗಾಗಲೇ ಮೆಸ್ಕಾಂ ಪವರ್ ಮ್ಯಾನ್ ಗಳು ಸರಿಪಡಿಸಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.