ಕೈಕಾಲು ಕತ್ತರಿಸಿದ ಚಿರತೆಯ ಮೃತ ದೇಹ ಪತ್ತೆ:

 

 

ಬೆಳ್ತಂಗಡಿ: ಕೊಳೆತ ರೀತಿಯಲ್ಲಿ ಚಿರತೆಯೊಂದು ಸವಣಾಲು ಗ್ರಾಮದಲ್ಲಿ ಪತ್ತೆಯಾಗಿದೆ.
ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶ ಇತ್ತಿಲಪೆಲ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ಕಾಲುಗಳನ್ನು ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿದ್ದು, ಯಾವುದೋ ಕಾಡು ಪ್ರಾಣಿಗಳು ತಿಂದಿರಬಹುದೋ ಅಥವಾ  ಯಾರೋ ದುಷ್ಕರ್ಮಿಗಳು ಕೊಂದು ಕಾಲಿನ ಉಗುರುಗಳಿಗಾಗಿ ಕಾಲನ್ನು ತುಂಡರಿಸಿಕೊಂಡು  ಹೋಗಿರುವ ಬಗ್ಗೆ  ಅನುಮಾನ ವ್ಯಕ್ತವಾಗುತ್ತಿದೆ.

 

 

 

ಹಲವಾರು ಸಮಯಗಳಿಂದ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಅವ್ಯಾಹತವಾಗಿ ಬೇಟೆ ನಡೆಯುತ್ತಿರುವ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇದ್ದರೂ ಸುಮ್ಮನಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. .ಅರಣ್ಯ ಇಲಾಖೆಯವರು ಈಗಾಗಲೇ ಮಾಹಿತಿ ಸಂಗ್ರಹಿಸುತಿದ್ದಾರೆ .ಬೇಟೆಗಾರರಿಗೆ ಬಲಿಯಾಗಿದೆಯೋ ಅಥವಾ ಇನ್ಯಾವುದೋ ಸಮಸ್ಯೆಗಳಿಂದ ಸಾವನ್ನಪ್ಪಿದ್ದೆಯೋ ಎಂಬುವುದು ತನಿಖೆಯಿಂದ ಗೊತ್ತಾಗಬೇಕಿದೆ.ಅದಲ್ಲದೇ ಕಳೇಬರ ಸಂಪೂರ್ಣ ಕೊಳೆತಿದ್ದು ಹುಲಿಯೋ ಅಥವಾ ಚಿರತೆಯೋ ಎಂಬ ಬಗ್ಗೆಯೂ ತಿಳಿದು ಬರಬೇಕಾಗಿದೆ.ಮೇಲ್ನೋಟಕ್ಕೆ ಚಿರತೆಯಂತೆ ಕಂಡು ಬರುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

error: Content is protected !!