ಪುಣೆ:ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ13ನೇ ವಾರ್ಷಿಕ ಸಮಾವೇಶ
ಪುಣೆಯ ರಾಮಕೃಷ್ಣ ಮೋರೆ ಸಭಾಂಗಣ ಪಿಂಪ್ರಿ ಯಲ್ಲಿ ಇತ್ತಿಚೆಗೆ ನಡೆಯಿತು.
ಪಟ್ಲ ಪೌಂಡೇಶನ್ ಸಂಚಾಲಕ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಶಶಿಧರ್ ಶೆಟ್ಟಿವರನ್ನು ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ದೈವಾರಾಧನೆ ವಿಮರ್ಶಕ ತಮ್ಮಣ್ಣ ಶೆಟ್ಟಿ, ಬಂಟರ ಪಿಂಪ್ರಿ ಚಿಂಚ್ವಾಡ್ ಮಹಿಳಾ ವಿಭಾಗದ ಸಂಚಾಲಕಿ ಪ್ರಭ ಶೆಟ್ಟಿ , ಪಿಂಪ್ರಿ ಚಿಂಚ್ವಾಡ್ ತುಳುಸಂಘ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಲ್, ಉಪಾಧ್ಯಕ್ಷ, ಸಂಘಟಕ ದಿನೇಶ್ ಶೆಟ್ಟಿ ಉಜಿರೆ ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.