ಶಿವರಾತ್ರಿ ಹಿನ್ನಲೆ ಧರ್ಮಸ್ಥಳಕ್ಕೆ ಸಿನಿತಾರೆಯರು ಕುಟುಂಬ ಸಮೇತರಾಗಿ ಭೇಟಿ

ಧರ್ಮಸ್ಥಳ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿನಿತಾರೆಯರು ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

ಖ್ಯಾತ ಚಲನಚಿತ್ರ ತಾರೆ ಶೃತಿ ಮತ್ತು ಕುಟುಂಬದವರು, ಸುರಪುರದ ಶಾಸಕರಾದ ರಾಜು ಗೌಡ ಮತ್ತು ಕುಟುಂಬದವರು, ಖ್ಯಾತ ಸಿನೆಮಾ ನಿರ್ದೆಶಕರಾದ ತರುಣ್ ಸುಧೀರ್ ದಂಪತಿಗಳು, ಡಿಮ್ಯಾಕ್ಸ್ ಕಂಪೆನಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ದಯಾನಂದ ಮತ್ತು ಕುಟುಂಬದವರು ಫೆ.27ರಂದು ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

error: Content is protected !!