ತೆಲಂಗಾಣ: ತನ್ನ ಗದ್ದೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೈತರೊಬ್ಬರಿಗೆ 500ರ ಕಂತೆ, ಕಂತೆ ನೋಟು ಸಿಕ್ಕಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ದಾಮಚರ್ಲಾ ಮಂಡಲಂನ ಬೊತ್ತಾಲಪೊಲಂ ಗ್ರಾಮದಲ್ಲಿ ನಡೆದಿದೆ.
ತನ್ನ ಹೊಲದಲ್ಲಿ ಇಷ್ಟೊಂದು ಹಣವನ್ನು ನೋಡಿದ ರೈತ ಶಾಕ್ ಆಗಿ, ಕೂಡಲೇ ಅಷ್ಟು ದುಡ್ಡನ್ನ ಹೊತ್ತುಕೊಂಡು ತನ್ನ ಮನೆಗೆ ಬಂದಿದ್ದಾರೆ. ಅಲ್ಲದೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ರೈತರ ಮನೆಗೆ ಬಂದ ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ 500ರ ನೋಟುಗಳು ನಕಲಿ ಎಂಬುದು ಪತ್ತೆಯಾಗಿವೆ.
ನೋಟುಗಳ ಮೇಲೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸುವ ಬದಲು, ‘ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ. ಇದರಿಂದ ಪೊಲೀಸರು ಕೂಡ ಫುಲ್ ಶಾಕ್ ಆಗಿದ್ದಾರೆ.
ಈ ಹಣದಿಂದ ತನಗೆ ಅಷ್ಟು ಇಷ್ಟು ಸಿಗಬಹುದು ಎಂದು ಅಂದುಕೊAಡಿದ್ದ ರೈತನಿಗೆ ಮಾತ್ರ ನಿರಾಸೆಯಾಗಿದೆ.