ವಧುವಿನ ಸ್ನೇಹಿತೆಗೆ ಹಾರ ಹಾಕಿದ ವರ: ಮದುವೆ ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ: ಸಂಭ್ರಮದ ಮನೆ ಅಲ್ಲೋಲ ಕಲ್ಲೋಲ, ರಣರಂಗ..!

ಮದುವೆ ಮಂಟಪದಲ್ಲಿ ವರ ಮಾಡಿದ ಎಡವಟ್ಟಿನಿಂದ ಮದುವೆ ರದ್ದಾಗಿದ್ದಲ್ಲದೆ ವಧುವಿನಿಂದಲೇ ವರನಿಗೆ ಕಪಾಳಮೋಕ್ಷವಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

26 ವರ್ಷದ ವರ ರವೀಂದ್ರ ಕುಮಾರ್ ಮತ್ತು 21 ವರ್ಷದ ವಧು ರಾಧಾ ದೇವಿಗೆ ವಿವಾಹ ನಿಶ್ಚಯವಾಗಿತ್ತು. ವರ ರವೀಂದ್ರ ಕುಮಾರ್ ತನ್ನ ಮದುವೆ ಮೆರವಣಿಗೆಯೊಂದಿಗೆ ಸ್ಥಳಕ್ಕೆ ತಡವಾಗಿ ಬಂದಿದ್ದ. ಅದಕ್ಕೂ ಮೊದಲು ಆತ ತನ್ನ ಸ್ನೇಹಿತರೊಂದಿಗೆ ಸೇರಿ ಕಂಠಪೂರ್ತಿ ಕುಡಿದಿದ್ದ. ಬಳಿಕ ಮದುವೆ ಮನೆಯಲ್ಲಿ ಕುಡಿದ ಮತ್ತಿನಲ್ಲಿ ವಧುವಿನ ಬದಲು ಆಕೆಯ ಪಕ್ಕದಲ್ಲಿದ್ದ ಆಕೆಯ ಆಪ್ತ ಸ್ನೇಹಿತೆಗೆ ಹೂವಿನ ಹಾರ ಹಾಕಿದ್ದಾನೆ.

ಈ ವೇಳೆ ಮದುವೆಮನೆಯಲ್ಲಿ ಗಲಾಟೆ ಏರ್ಪಟ್ಟಿದ್ದು, ವಧು ವರನಿಗೆ ಕಪಾಳ ಮೋಕ್ಷ ಮಾಡಿದ್ದಲ್ಲದೇ ಮದುವೆಯನ್ನೇ ರದ್ದು ಮಾಡಿದ್ದಾರೆ.

ಘಟನೆಯ ಬಳಿಕ ಸಂಬAಧಿಕರು ಪರಸ್ಪರ ಕಿತ್ತಾಡಿಕೊಂಡಿದ್ದು, ಮಂಟಪದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಈ ಮಧ್ಯೆ ವರದಕ್ಷಿಣೆ ಕಿರುಕುಳ ಕೂಡ ಕೇಳಿಬಂದಿದೆ.
ಮೊದಲು 2.5ಲಕ್ಷ ಮತ್ತು ವಿವಾಹದ ದಿನ 2 ಲಕ್ಷ ರೂ ನೀಡುವುದಾಗಿ ವಧುವಿನ ಕಡೆಯವರು ಹೇಳಿದ್ದರು. ಆದರೆ ಈ ಹಣ ಸಾಕಾಗುವುದಿಲ್ಲ ಎಂದು ವರನ ಕಡೆಯವು ಗಲಾಟೆ ತೆಗೆದಿದ್ದಾರೆ. ಹೀಗಾಗಿ ವಧು ಮದುವೆ ರದ್ದು ಮಾಡಿ ಪೊಲೀಸ್ ದೂರು ನೀಡಿದ್ದಾರೆ. ಮದುವೆಗೆ ಕುಡಿದು ಬಂದಿದ್ದ ವರ ರವೀಂದ್ರ ಕುಮಾರ್ ವಧುವಿನ ಕುಟುಂಬ ಮತ್ತು ಸಂಬಧಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.

error: Content is protected !!