ಮಗಳ ಮದುವೆ ಮಂಟಪದಲ್ಲಿ ತಂದೆ ಹೃದಯಾಘಾತದಿಂದ ಕುಸಿದು ಬಿದ್ದು, ಸಾವನ್ನಪ್ಪಿರುವ ಕರುಣಾಜನಕ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.
ಕಾಮರೆಡ್ಡಿ ಜಿಲ್ಲೆಯ ಭಿಕ್ಕನೂರು ಮಂಡಲದ ರಾಮೇಶ್ವರ ಪಲ್ಲಿಯಲ್ಲಿ ಕುಡಿಕ್ಯಾಲ ಬಾಲಚಂದ್ರ ಎನ್ನುವವರು ಶುಕ್ರವಾರ ಸ್ಥಳೀಯ ಕಲ್ಯಾಣಮಂಟಪದಲ್ಲಿ ತಮ್ಮ ಮಗಳ ಮದುವೆ ಏರ್ಪಡಿಸಿದ್ದರು. ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಏಕಾಏಕಿ ಬಾಲಚಂದ್ರ ಅವರು ಮಂಟಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ತಕ್ಷಣ ಸಂಬಂಧಿಕರು ಕಾಮರೆಡ್ಡಿ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮುಹೂರ್ತಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಇರುವಾಗ ಈ ಘಟನೆ ಸಂಭವಿಸಿದ್ದು ಕುಟಂಬಸ್ಥರೆಲ್ಲರೂ ದುಃಖದಲ್ಲಿ ಮುಳುಗಿದರು.
ಮದುವೆಯಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರೆಲ್ಲ ಬಾಲಚಂದ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.