ಕಾಶಿಬೆಟ್ಟು: ಬೈಕ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರರಿಗೆ ಗಾಯಗೊಂಡ ಘಟನೆ ಫೆ.21ರಂದು ಬೆಳಗ್ಗೆ ಸಂಭವಿಸಿದೆ.
ಚಿಕ್ಕಮಂಗಳೂರಿನಿಂದ ಮೂಡಬಿದ್ರೆಗೆ ಬರುತ್ತಿದ್ದ ಕಾರು ಹಾಗೂ ಅಳದಂಗಡಿಯಿಂದ ಉಜಿರೆ ಕಡೆ ಹೋಗುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು, ಘಟನಯಲ್ಲಿ ಬೈಕ್ ಸವಾರ ಅಳದಂಗಡಿ ನಿವಾಸಿ ಸುರೆಂದ್ರ ಬಲ್ಯಾಯಕೋಡಿ ಅವರ ಕಾಲಿಗೆ ಗಂಭೀರ ಗಾಯವಾಗಿದೆ.
ತಕ್ಷಣ ಬೈಕ್ ಸವಾರನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ.