ಕೇರಳ: ದೇವಾಲಯದ ಉತ್ಸವದಲ್ಲಿ ಮನುಷ್ಯರ ಮೇಲೆ ಆನೆಗಳ ದಾಳಿ: ಮೂವರು ಸಾವು: 36 ಜನರಿಗೆ ಗಾಯ..!

ಕೋಝಿಕ್ಕೋಡ್: ಕೊಯಿಲಾಂಡಿಯಲ್ಲಿ ದೇವಾಲಯದ ಉತ್ಸವಕ್ಕಾಗಿ ತಂದಿದ್ದ ಆನೆಗಳು ಇದ್ದಕ್ಕಿದ್ದಂತೆ ರೊಚ್ಚಿಗೆದ್ದು, ಪರಿಣಾಮ ಮೂವರು ಸಾವನ್ನಪ್ಪಿ 36 ಮಂದಿ ಗಾಯಗೊಂಡಿದ್ದಾರೆ.

ಕೊಯ್ಲಾಂಡಿಯ ಕುರುವಂಗಾಡ್‌ನಲ್ಲಿರುವ ಮಣಕ್ಕುಳಂಗರ ದೇವಾಲಯದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಆನೆಗಳು ಕೋಪಗೊಂಡು ಓಡಿಹೋಗಿದ್ದು ಈ ವೇಳೆ ಮೂವರು ಸಾವನ್ನಪ್ಪಿದ್ದಾರೆ.

ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳು ರೊಚ್ಚಿಗೆದ್ದ ಪರಿಣಾಮ ಆನೆಗಳ ಕಾಲಡಿಗೆ ಸಿಲುಕಿ ಭಕ್ತಾಧಿಗಳು ಗಾಯಗೊಂಡಿದ್ದಾರೆ.

ಒಂದು ಆನೆ ಆಕ್ರಮಣಕಾರಿಯಾಗಿ ಮತ್ತೊಂದು ಆನೆಯನ್ನು ಕೆರಳಿಸಿದ್ದರಿಂದ ಘಟನೆ ಸಂಭವಿಸಿದೆ.

error: Content is protected !!