ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿ ಡೀಸೆಲ್ ಟ್ಯಾಂಕರ್!: ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ!

ಕಲಬುರಗಿ: ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಡೀಸೆಲ್ ಟ್ಯಾಂಕರ್ ಚಲಿಸಿದ ಘಟನೆ ಶಹಬಾದ್ ತಾಲೂಕಿನಲ್ಲಿ ಸಂಭವಿಸಿದೆ.

ಭಂಕೂರು ಗ್ರಾಮದಲ್ಲಿ ಟ್ಯಾಂಕರ್ ನ ಚಾಲಕ ಹ್ಯಾಂಡ್‌ಬ್ರೇಕ್ ಹಾಕದೇ ಟ್ಯಾಂಕರ್ ನಿಲ್ಲಿಸಿ, ಕಿರಾಣಿ ಅಂಗಡಿಗೆ ಹೋಗಿದ್ದ. ಈ ವೇಳೆ ಟ್ಯಾಂಕರ್ ಏಕಏಕಿ ಹಿಂದಕ್ಕೆ ಚಲಿಸಿ ಕಿರಣಿ ಅಂಗಡಿಗೆ ನುಗ್ಗಿದೆ.

ಘಟನೆಯಲ್ಲಿ ಅಂಗಡಿ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!