ಜಿದ್ದಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ತೀವ್ರ ಎದೆ ನೋವು..!: ಊರಿಗೆ ಮರಳುವ ಸಂತೋಷದಲ್ಲೇ ಇಹಲೋಕ ತ್ಯಜಿಸಿದ ಹಿದಾಯತ್!

ಬೆಳ್ತಂಗಡಿ: ಊರಿಗೆ ಮರಳುವ ಸಂತೋಷದಲ್ಲೇ ಬೆಳ್ತಂಗಡಿಯ ನಿವಾಸಿಯೊಬ್ಬರು ಇಹಲೋಕ ತ್ಯಜಿಸಿದ ಘಟನೆ ಫೆ.13ರಂದು ಸಂಭವಿಸಿದೆ.

ಸಂಜಯನಗರ ನಿವಾಸಿ ಹಿದಾಯತ್ ಎಂಬವರು ಸೌದಿ ಅರೇಬಿಯಾದಲ್ಲಿದ್ದು, ಗುರುವಾರ ತಡ ರಾತ್ರಿ ತನ್ನ ಗೆಳೆಯ ರಫೀಕ್ ಎಂಬವರಿಗೆ ಕರೆ ಮಾಡಿ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನನ್ನು ಕರೆಕೊಂಡು ಹೋಗಲು ಬರುವಂತೆ ತಿಳಿಸಿದ್ದಾರೆ. ಬಳಿಕ ಜಿದ್ದಾದಿಂದ ರಾತ್ರಿ 10:30ರ ವಿಮಾನ ಏರಲು ಕಾರಲ್ಲಿ ಬಂದ ಅವರಿಗೆ ವಿಮಾನ ನಿಲ್ದಾಣದಲ್ಲೇ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಅಲ್ಲಿನ ಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅದಾಗಲೇ ಅವರು ಇಹಲೋಕ ತ್ಯಜಿಸಿದರು.

ಅತ್ಯುತ್ತಮ ಹಿನ್ನಲೆ ಗಾಯಕರೂ ಆಗಿದ್ದ ಅವರು ಆರಂಭದಲ್ಲಿ ಉದ್ಯೋಗ ನಿಮಿತ್ತಬಹರೈನ್ ಗೆ ತೆರಳಿದ್ದರು. ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದ್ದು ಕಾರ್ಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಮೃತರು ತಂದೆ ಅಬ್ದುಲ್ ರಖಾಕ್, ತಾಯಿ ಶಂಶಿರ ಬಾನು, ಪತ್ನಿ ರೇಷ್ಮಾ ಹಾಗೂ ಒಂದು ಗಂಡು, ಮೂರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಪಾರ್ಥಿವ ಶರೀರವನ್ನು ಊರಿಗೆ ತರುವ ಬಗ್ಗೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಒಂದು ದಿನದಲ್ಲಿ ವಿವರ ತಿಳಿಯಲಿದೆ ಎಂದು ಅವರ ಸ್ನೇಹಿತ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ತಿಳಿಸಿದ್ದಾರೆ.

error: Content is protected !!