ಚಿಂತಾಜನಕ ಸ್ಥಿತಿಯಲ್ಲಿ ಕಾಡಾನೆ ಪತ್ತೆ: ಚಾರ್ಮಾಡಿ ಬಳಿಯ ಗುಡ್ಡದಲ್ಲಿ ಅರೆಪ್ರಜ್ಙಾವಸ್ಥೆಯಲ್ಲಿ ಬಿದ್ದಿರುವ ಸಲಗ:

 

 

ಬೆಳ್ತಂಗಡಿ : ಕಾಡಾನೆಯೊಂದು ಗಂಭೀರವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಬಳಿಯ ಅರಣ್ಯದಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಬಂದಿದ್ದು. ಸ್ಥಳಕ್ಕೆ ಪಶು ವೈದ್ಯರು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನಾರು ಪ್ರದೇಶದ ಗುಡ್ಡದಲ್ಲಿ ಫೆ.13 ರಂದು ಮಧ್ಯಾಹ್ನ ಕಾಡಾನೆ ಅರೆ ಪ್ರಜ್ಞೆ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು ತಕ್ಷಣ ಸಿಬ್ಬಂದಿಗಳು ಹಾಗೂ ಪಶು ವೈದ್ಯರಾದ ಡಾ. ಯಶಸ್ವಿಯವರು ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡುತ್ತಿದ್ದು. ಆನೆ ಚಿಂತಾಜನಕ ಸ್ಥಿತಿಯಲ್ಲಿ ಇದೆ ಎನ್ನಲಾಗಿದೆ.

ಆನೆಯ ದೇಹದಲ್ಲಿ ಗಾಯಗಳಾಗಿದ್ದು. ಯಾವ ಕಾರಣದಿಂದ ಆನೆಗೆ ಗಾಯವಾಗಿದೆ ಎನ್ನುವ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!