ಅರಮಲೆಬೆಟ್ಟ: ಬ್ರಹ್ಮಕುಂಭಾಭಿಷೇಕ ನಡೆಯುತ್ತಿದ್ದ ಸಂದರ್ಭದಲ್ಲೆ ಶ್ರೀ ಕೊಡಮಣಿತ್ತಾಯ ದೈವ ಕಾರ್ಣಿಕ ಮೆರೆದ ಘಟನೆ ನಡೆದಿದೆ.
ಘಟನೆ1: ಭಕ್ತೆಯೊಬ್ಬರು ದೈವಸ್ಥಾನದಲ್ಲಿ ಚಿನ್ನದ ಉಂಗುರ ಕಳೆದುಕೊಂಡಿದ್ದು ತಕ್ಷಣ ಅವರು ಬ್ರಹ್ಮಕುಂಭಾಭಿಷೇಕದ ಅಧ್ಯಕ್ಷರಾದ ಶಶಿಧರ ಶೆಟ್ಟಿಯವರಿಗೆ ತಿಳಿಸಿದ್ದಾರೆ. ಹಾಗೆಯೆ ದೈವದ ಕಾರ್ಣಿಕ ಇರುವುದು ನಿಜವಾದರೆ 24 ಗಂಟೆಯೊಳಗೆ ನನಗೆ ಕಳೆದುಹೋದ ಚಿನ್ನದ ಉಂಗುರ ಸಿಗಬೇಕು ಎಂದು ಪ್ರಾರ್ಥಿಸಿದ್ದಾರೆ.
ಇಂದು ಬೆಳಗ್ಗೆ ದೈವಸ್ಥಾನದಿಂದ ಕಸ ರಾಶಿ ಮಾಡಿ ಎಸೆಯಲು ಹೋದಾಗ ಆ ಕಸದ ರಾಶಿಯಲ್ಲಿ ಚಿನ್ನದ ಉಂಗುರ ಪತ್ತೆಯಾಗಿದೆ. ಬಳಿಕ ಆ ಭಕ್ತೆ ದೈವಕ್ಕೆ ಹರಕೆಯ ರೂಪದಲ್ಲಿ ಮಲ್ಲಿಗೆ ನೀಡಿದ್ದಾರೆ.
ಘಟನೆ 2: ವ್ಯಕ್ತಿಯೊಬ್ಬರು ಬೈಕ್ ಕೀ ಕಳೆದುಕೊಂಡಿದ್ದರು. ದೈವಸ್ಥಾನಕ್ಕೆ ಬಂದು ಕೀ ಸಿಗಬೇಕು ಎಂದು ಪ್ರಾರ್ಥಿಸಿದ್ದು, ಕೆಲವೇ ಗಂಟೆಯಲ್ಲಿ ಕೀ ಪತ್ತೆಯಾಗಿದೆ. ನಂತರ ಅವರು ಕೂಡ ದೈವಕ್ಕೆ ಹರಕೆಯ ರೂಪದಲ್ಲಿ ಸಿಯಾಳ ನೀಡಿದ್ದಾರೆ.
ಕ್ಷೇತ್ರದ ಕಾರ್ಣಿಕವನ್ನು ಭಕ್ತರ ಮೂಲಕ ಸ್ವತಃ ಅನುಭವ ಪಡೆದ ಶಶಿಧರಶೆಟ್ಟಿಯವರು ಇಲ್ಲಿ ನೆನೆದ ಕಾರ್ಯ ಸಿದ್ದಿಯಾಗುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.